Friday, December 19, 2025

CINE | ಬಾಕ್ಸ್ ಆಫೀಸ್ ವಾರ್: ‘ಧುರಂಧರ್’ಗೆ ಕಿರೀಟ, ‘ಅಖಂಡ 2’ಗೆ ಜಯ, ‘ಡೆವಿಲ್’ ಪಾತಾಳಕ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರದ ಮೊದಲ ದಿನದ ಗಳಿಕೆ ಯಾವುದೇ ಚಿತ್ರದ ಭವಿಷ್ಯವನ್ನು ನಿರ್ಧರಿಸುತ್ತದೆ. ಡಿಸೆಂಬರ್ 15, ಸೋಮವಾರದಂದು ಬಿಡುಗಡೆಯಾದ ಪ್ರಮುಖ ಚಿತ್ರಗಳಾದ ‘ಡೆವಿಲ್’, ‘ಅಖಂಡ 2’ ಮತ್ತು ‘ಧುರಂಧರ್’ನ ಬಾಕ್ಸ್ ಆಫೀಸ್ ವರದಿ ಈಗ ಹೊರಬಿದ್ದಿದೆ. ಈ ಲೆಕ್ಕಾಚಾರದಲ್ಲಿ, ‘ಧುರಂಧರ್’ ಸಿನಿಮಾ ಭರ್ಜರಿ ಪ್ರದರ್ಶನ ನೀಡಿದ್ದರೆ, ‘ಅಖಂಡ 2’ ಉತ್ತಮ ಕಲೆಕ್ಷನ್ ಕಾಯ್ದುಕೊಂಡಿದೆ. ಆದರೆ ‘ಡೆವಿಲ್’ ಚಿತ್ರದ ಗಳಿಕೆ ಪಾತಾಳಕ್ಕೆ ಕುಸಿದಿದೆ.

ಮೆಗಾ ಓಪನಿಂಗ್ ಪಡೆದಿದ್ದ ‘ಡೆವಿಲ್’ ಚಿತ್ರಕ್ಕೆ ಮೊದಲ ದಿನ 13 ಕೋಟಿ ರೂ. ಕಲೆಕ್ಷನ್ ಆಗಿತ್ತು. ನಂತರ ಗಳಿಕೆಯಲ್ಲಿ ಇಳಿಕೆಯಾಗುತ್ತಾ ಬಂದರೂ, ಭಾನುವಾರ 4 ಕೋಟಿ ರೂ. ಬಾಚಿಕೊಂಡಿತ್ತು. ಆದರೆ ಮೊದಲ ಸೋಮವಾರದ ಕಲೆಕ್ಷನ್ ಮಾತ್ರ ನಿರ್ಮಾಪಕರಿಗೆ ಆತಂಕ ತಂದಿದೆ. sacnilk ವರದಿಯ ಪ್ರಕಾರ, ಈ ಚಿತ್ರ ಸೋಮವಾರ ಕೇವಲ 1.40 ಕೋಟಿ ರೂಪಾಯಿ ಗಳಿಸಿದೆ.

ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಕುಸಿಯುವ ಸಾಧ್ಯತೆ ಇದ್ದು, ಡಿಸೆಂಬರ್ 25 ರಂದು ’45’ ಮತ್ತು ‘ಮಾರ್ಕ್’ ಚಿತ್ರಗಳ ಬಿಡುಗಡೆಯಿಂದ ‘ಡೆವಿಲ್’ಗೆ ಸಿಗುವ ಶೋಗಳ ಸಂಖ್ಯೆಯೂ ಕಡಿಮೆಯಾಗಬಹುದು. ಸದ್ಯ ಈ ಚಿತ್ರದ ಒಟ್ಟು ಗಳಿಕೆ 25 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.

ನಕಾರಾತ್ಮಕ ವಿಮರ್ಶೆಗಳ ಹೊರತಾಗಿಯೂ ‘ಅಖಂಡ 2’ ಸಿನಿಮಾ ಮೊದಲ ಸೋಮವಾರದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ‘ಪಾಸ್’ ಆಗಿದೆ. ಈ ಚಿತ್ರ ಸೋಮವಾರದಂದು 5.5 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಕೇವಲ ನಾಲ್ಕು ದಿನಗಳಲ್ಲಿ ಚಿತ್ರದ ಒಟ್ಟು ಕಲೆಕ್ಷನ್ 66.45 ಕೋಟಿ ರೂಪಾಯಿ ತಲುಪಿದೆ.

ಸದ್ಯ ಬಾಕ್ಸ್ ಆಫೀಸ್‌ನ ಕಿಂಗ್ ಎನಿಸಿಕೊಂಡಿರುವ ‘ಧುರಂಧರ್’ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಈ ಚಿತ್ರವು ತನ್ನ ಎರಡನೇ ಸೋಮವಾರದಂದು ಭರ್ಜರಿ 29 ಕೋಟಿ ರೂಪಾಯಿ ಗಳಿಸಿದೆ! ಈ ಮಟ್ಟದ ಕಲೆಕ್ಷನ್ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 379 ಕೋಟಿ ರೂಪಾಯಿ ತಲುಪಿದ್ದು, ಶೀಘ್ರದಲ್ಲೇ 500 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆ ಇದೆ.

error: Content is protected !!