ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರಿಗೆ 559.91 ಕೋಟಿ ರೂ. ವಿಮೆ ಹಣ ದೊರಕಿದೆ. ಜಿಲ್ಲೆಯ 5,81,527 ಲಕ್ಷ ರೈತರು 80 ಕೋಟಿಯಷ್ಟು ರೈತರ ಪಾಲಿನ ವಿಮಾ ಹಣವನ್ನು ಪಾವತಿಸಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಹೇಳಿದ್ದಾರೆ.
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಗೆ ಸಂಬಂಧಿಸಿದಂತೆ 2024-25ನೇ ಸಾಲಿಗೆ ಬೆಳೆ ವಿಮೆ ದಾವೆಗಳ ಕುರಿತು ರೈತರಿಂದ ಯಾವುದೇ ದೂರುಗಳನ್ನು ಸರ್ಕಾರ ಸ್ವೀಕರಿಸಿದೆಯೇ? ಬೆಳೆ ಹಾನಿಯನ್ನು ನಿಖರವಾಗಿ ಅಂದಾಜು ಮಾಡಲು ಸರ್ಕಾರ ಯಾವ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ? ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ರೈತರಿಗೆ ಜಿಲ್ಲಾವಾರು ನೀಡಲಾದ ಬೆಳೆ ವಿಮೆಯ ವಿವರಗಳೇನು? ರೈತರಿಗೆ ಬೆಳೆ ವಿಮಾ ದಾವೆಗಳನ್ನು ಸಮಯಕ್ಕೆ ಸರಿಯಾಗಿ ಹಾಗೂ ಶೀಘ್ರವಾಗಿ ಪಾವತಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರಗಳೇನು? ಎಂದು ಸಂಸದ ಗೊವಿಂದ ಕಾರಜೋಳ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಕೃಷಿ ಸಚಿವರಿಗೆ ಪ್ರಶ್ನೆ ಕೇಳಿದರು.
ಸಂಸದರ ಪ್ರಶ್ನೆಗೆ ಉತ್ತರ ನೀಡಿದ ರಾಮನಾಥ್ ಠಾಕೂರ್, ಚಿತ್ರದುರ್ಗ ಜಿಲ್ಲೆಯಲ್ಲಿ 2,48,212 ಲಕ್ಷ ರೈತರಿಗೆ 559.91 ಕೋಟಿ ರೂ. ವಿಮಾ ಹಣ ದೊರಕಿದೆ. ಅದೇ ರೀತಿ ರಾಜ್ಯದಲ್ಲಿ 1,29,95,086 ಕೋಟಿ ರೈತರು ವಿಮೆಗೆ ನೊಂದಣಿ ಮಾಡಿಸಿಕೊಂಡಿದ್ದು, 1,584 ಕೋಟಿ ವಿಮೆ ಪ್ರೀಮಿಯಮ್ ಪಾವತಿಸಿರುತ್ತಾರೆ. ರಾಜ್ಯದ ರೈತರಿಗೆ 10,000 ಕೋಟಿಯಷ್ಟು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ವಿಮೆ ಪರಿಹಾರ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಪಿಎಂ ಫಸಲ್ ಭಿಮಾ ಯೋಜನೆಯಡಿ ಚಿತ್ರದುರ್ಗ ರೈತರಿಗೆ 559.91 ಕೋಟಿ ರೂ. ವಿಮೆ ಹಣ

