ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಚಳಿ ತೀವ್ರವಾಗಿದ್ದು, ಜನರು ನಡುಗುತ್ತಿದ್ದಾರೆ. ಅದರಲ್ಲಿಯೂ ಉತ್ತರ ಕರ್ನಾಟಕ ಜಿಲ್ಲೆಗಳಿ ಚಳಿ ವಿಪರೀತವಾಗಿದ್ದು, ಜನ ಹೈರಾಣಾಗಿದ್ದಾರೆ.
ಎರಡು ದಶಕದಲ್ಲಿ ಮೂರನೇ ಬಾರಿ ವಿಪರೀತ ಚಳಿ ವಾತಾವರಣವಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಇಂದು ರಸ್ತೆ ಕಾಣೋದು ಅನುಮಾನವಾಗಿದೆ. ಟ್ರಾವೆಲ್ ಮಾಡುವವರು ಮುಂಜಾನೆ ಪ್ರಯಾಣ ಆದಷ್ಟು ಅವಾಯ್ಡ್ ಮಾಡುವುದು ಉತ್ತಮವಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಹಾಸನ, ತುಮಕೂರು ಮತ್ತು ಮಂಡ್ಯದಲ್ಲಿ ಬೆಳಿಗ್ಗೆ ದಟ್ಟ ಮಂಜು ಮುಸುಕಿದ ವಾತಾವರಣವಿರಲಿದೆ. ಮುಂಜಾನೆ 8 ಗಂಟೆಯವರೆಗೆ ದೃಷ್ಟಿಗೋಚರತೆ ಕಡಿಮೆ ಇರುವುದರಿಂದ ವಾಹನ ಸವಾರರು ಎಚ್ಚರವಹಿಸಬೇಕಿದೆ. ಹಗಲಿನಲ್ಲಿ ಆಹ್ಲಾದಕರ ಬಿಸಿಲು ಇರಲಿದ್ದು, ರಾತ್ರಿಯ ವೇಳೆ ಕನಿಷ್ಠ ತಾಪಮಾನವು 13°C ನಿಂದ 15°C ರವರೆಗೆ ಇರಲಿದೆ.
ವಿಜಯಪುರ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ 8 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿತ್ತು. ಇದೀಗ ವಿಜಯಪುರ ಜಿಲ್ಲೆಯ ಜನರು ಮೈಕೊರೆಯುವ ಚಳಿಯಿಂದ ತತ್ತರಿಸುತ್ತಿದ್ದು, ಕಳೆದ 20 ವರ್ಷಗಳಲ್ಲಿ ಮೂರನೇ ಬಾರಿ ಕನಿಷ್ಠ ತಾಪಮಾನ ದಾಖಲಾಗಿದೆ. 10 ವರ್ಷಗಳಲ್ಲಿ ಎರಡನೇ ಬಾರಿ ಅತಿ ಕಡಿಮೆ ಉಷ್ಣಾಂಶ ಕಂಡುಬಂದಿದೆ.
ಎರಡು ದಶಕದಲ್ಲಿ ಮೂರನೇ ಬಾರಿ ವಿಪರೀತ ಚಳಿ, ಉತ್ತರದಲ್ಲಿ ರಸ್ತೆ ಕಾಣೋದೇ ಅನುಮಾನ

