ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಲೆಬ್ರೆಟಿಗಳನ್ನ ನೋಡೋದಕ್ಕೆ ಫ್ಯಾನ್ಸ್ ಮುಗಿಬೀಳೋದು ಸಹಜ. ಆದರೆ ಅಕ್ಷರಶಃ ನಟಿಯ ಮೈಮೇಲೆ ಬೀಳೋದಕ್ಕೆ ಫ್ಯಾನ್ಸ್ ಬಂದಿದ್ದಾರೆ. ನಟಿ ನಿಧಿ ಅಗರ್ವಾಲ್ ಗಂಡಸರ ಈ ವರ್ತನೆ ನೋಡಿ ಶಾಕ್ ಆಗಿದ್ದಾರೆ.
ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕಿ ನಿಧಿ ಅಗರ್ವಾಲ್ ವಾಪಸ್ ತೆರಳುವಾಗ ಕಹಿ ಅನುಭವ ಉಂಟಾಗಿದೆ. ಫ್ಯಾನ್ಸ್ ಕ್ರೌಡ್ ಮಧ್ಯೆ ನಟಿ ಸಿಕ್ಕಿಕೊಂಡು ಭಾರೀ ಕಸಿವಿಸಿ ಅನುಭವಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ದಿ ರಾಜಾ ಸಾಬ್’ ಚಿತ್ರದ ʻಸಹನಾ ಸಹನಾʼ 2ನೇ ಹಾಡು ನಿನ್ನೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಯ್ತು. ಹೈದರಾಬಾದ್‌ನ ಮಾಲ್‌ವೊಂದರಲ್ಲಿ ನಡೆದ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಮೆಲೋಡಿ ಹಾಡನ್ನ ರಿಲೀಸ್ ಮಾಡಲಾಗಿತ್ತು. ಪ್ರಭಾಸ್ ಜೊತೆ ಈ ಚಿತ್ರದಲ್ಲಿ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಎಸ್. ತಮನ್ ಸಂಗೀತ ಈ ಹಾರರ್ ಕಾಮಿಡಿ ಚಿತ್ರಕ್ಕಿದೆ.
ಸೆಲ್ಫಿಗಾಗಿ ಮೈಮೇಲೆ ಬಿದ್ದ ಫ್ಯಾನ್ಸ್: ಹೆದರಿ ನಡುಗಿದ್ರು ನಟಿ ನಿಧಿ ಅಗರ್ವಾಲ್

