Saturday, December 20, 2025

ಹೇಳಿದ್ದನ್ನೇ ಹೇಳಬೇಡಿ, ಉತ್ತರ ಕರ್ನಾಟಕದ ಬಗ್ಗೆ ಮಾತಾಡಿ: ಬಿಜೆಪಿಗೆ ಯತ್ನಾಳ್ ಕ್ಲಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಇಂದು ತೀವ್ರ ವಾಗ್ಯುದ್ಧ ಮತ್ತು ಹಾಸ್ಯದ ತುಣುಕುಗಳಿಗೆ ಸಾಕ್ಷಿಯಾಯಿತು. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಯಬೇಕಿದ್ದ ಸಂದರ್ಭದಲ್ಲಿ, ಆಡಳಿತ ಪಕ್ಷದ ಅಧಿಕಾರ ಹಂಚಿಕೆ ಮತ್ತು ಪ್ರತಿಪಕ್ಷದ ಆಂತರಿಕ ಗೊಂದಲಗಳ ವಿಚಾರವೇ ಮುನ್ನೆಲೆಗೆ ಬಂತು.

ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದ ಚರ್ಚೆ ನಡೆಯುತ್ತಿದ್ದಾಗ, ಬಿಜೆಪಿ ಶಾಸಕರು ಕಾಂಗ್ರೆಸ್ ಸರ್ಕಾರದ ‘ಅಧಿಕಾರ ಹಂಚಿಕೆ’ ಮತ್ತು ಸಿಎಂ ಬದಲಾವಣೆ ಕುರಿತ ಕಿತ್ತಾಟವನ್ನು ಪ್ರಸ್ತಾಪಿಸಿ ಕಾಲೆಳೆದರು. ಈ ವೇಳೆ ಅನಿರೀಕ್ಷಿತ ತಿರುವು ನೀಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮದೇ ಪಕ್ಷದ ವಿರುದ್ಧ ವಾಗ್ಬಾಣ ಬಿಟ್ಟರು.

“ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು, ಹಳೇ ರಾಗವನ್ನೇ ಹಾಡುತ್ತಾ ಸಮಯ ವ್ಯರ್ಥ ಮಾಡಲಾಗುತ್ತಿದೆ” ಎಂದು ಕಿಡಿಕಾರಿದ ಯತ್ನಾಳ್, “ಪಾಪ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರಿಯುತ್ತಾರೋ ಇಲ್ಲವೋ ಅದು ಅವರಿಗೆ ಬಿಟ್ಟಿದ್ದು, ಆದರೆ ಬಿಜೆಪಿಯಲ್ಲಿ ಅಧ್ಯಕ್ಷರು ಯಾರು ಎಂಬ ಗೊಂದಲವೇ ಇನ್ನೂ ಬಗೆಹರಿದಿಲ್ಲ” ಎಂದು ವ್ಯಂಗ್ಯವಾಡುವ ಮೂಲಕ ಸ್ವಪಕ್ಷೀಯರನ್ನೇ ಇಕ್ಕಟ್ಟಿಗೆ ಸಿಲುಕಿಸಿದರು.

error: Content is protected !!