ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರಿಸುವಾಗ ರಾಜ್ಯದ ಜಿಲ್ಲಾವಾರು ತಲಾದಾಯದ ಬಗ್ಗೆ ಮಾಹಿತಿ ನೀಡಿದ್ದು, ತಲಾ ಆದಾಯದಲ್ಲಿ ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಕಡಿಮೆ ಇರುವುದು ತಲಾ ಆದಾಯದಲ್ಲಿ ಹಿಂದುಳಿಯಲು ಒಂದು ಕಾರಣ. ತಲಾ ಆದಾಯದಲ್ಲಿ ಕಲಬುರಗಿ ಅತ್ಯಂತ ಹಿಂದುಳಿದಿದೆ ಎಂದು ಸಿಎಂ ಹೇಳಿ, ತಲಾ ಆದಾಯದ ಜಿಲ್ಲಾವಾರು ಪಟ್ಟಿಯನ್ನು ಸದನದ ಮುಂದಿಟ್ಟಿದ್ದಾರೆ.
ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
ಬೆಂಗಳೂರು ನಗರ- 7,38,910
ದಕ್ಷಿಣ ಕನ್ನಡ- 5,56,059
ಉಡುಪಿ- 5,33,469
ಚಿಕ್ಕಮಗಳೂರು-4,44,472
ಬೆಂಗಳೂರು ಗ್ರಾಮಾಂತರ- 4,04,138
ಶಿವಮೊಗ್ಗ-3,49,177
ಮಂಡ್ಯ- 3,06,448
ತುಮಕೂರು-3,02,707
ಕೊಡಗು- 2,94,898
ಹಾಸನ -2,94,272
ಬಳ್ಳಾರಿ- 2,93,985
ರಾಮನಗರ -2,77,619
ಉತ್ತರ ಕನ್ನಡ- 2,66,619
ಧಾರವಾಡ – 2,61,563
ಚಾಮರಾಜನಗರ- 2,59,387
ಬಾಗಲಕೋಟೆ- 2,49,478
ಮೈಸೂರು- 2,39,296
ಚಿಕ್ಕಬಳ್ಳಾಪುರ- 2,31,154
ಕೋಲಾರ- 2,15,255
ದಾವಣಗೆರೆ – 2,09,655
ಚಿತ್ರದುರ್ಗ – 1,98,950
ಗದಗ- 1,94,453
ಹಾವೇರಿ- 1,84,111
ರಾಯಚೂರು- 1,66,371
ವಿಜಯನಗರ- 1,65,546
ವಿಜಯಪುರ- 1,63,431
ಬೀದರ್- 1,63,298
ಬೆಳಗಾವಿ- 1,62,987
ಕೊಪ್ಪಳ- 1,61,491
ಯಾದಗಿರಿ- 1,46,364
ಕಲಬುರಗಿ- 1,43,610

