Friday, December 19, 2025

ಚಲಿಸುತ್ತಿದ್ದ ರೈಲನ್ನು ಹತ್ತೋಕೆ ಹೋಗಿದ್ದ ಯುವಕನ ಎಡಗೈ ಕಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕನೋರ್ವ ಎಡಗೈ ಕಳೆದುಕೊಂಡಿರುವ ದಾರುಣ ಘಟನೆ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಇಂದು ನಡೆದಿದೆ.

ಚಿಕ್ಕ ಹೊಸಹಳ್ಳಿಯ ನಿವಾಸಿ ಸಂದೀಪ್ (26) ಎಂಬ ಯುವಕ ಬೆಳಗ್ಗೆ ಸುಮಾರು 7:30ರ ಸಮಯದಲ್ಲಿ ಕೆಜಿಎಫ್ ನಿಂದ ಬೆಂಗಳೂರಿಗೆ ತೆರಳುವ ಪ್ಯಾಸೆಂಜರ್ ರೈಲಿಗೆ ಹತ್ತಲು ಪ್ರಯತ್ನಿಸಿದ್ದಾನೆ. ರೈಲು ನಿಲ್ದಾಣದಲ್ಲಿ ನಿಲ್ಲದೇ ಚಲಿಸುತ್ತಿರುವಾಗಲೇ ಹತ್ತಲು ಹೋಗಿ ಕಾಲು ಜಾರಿ ಬಿದ್ದಿದ್ದಾನೆ.

ಈ ವೇಳೆ ರೈಲಿನ ಚಕ್ರಕ್ಕೆ ಸಿಲುಕಿ ಅವನ ಎಡಗೈ ತುಂಡಾಗಿ ರೈಲು ಹಳಿಯಲ್ಲೇ ಬಿದ್ದಿದೆ. ಯುವಕ ಒದ್ದಾಟದಿಂದ ಪ್ಲಾಟ್‌ಫಾರ್ಮ್‌ಗೆ ಬಿದ್ದು ಪ್ರಾಣ ಉಳಿಸಿಕೊಂಡಿದ್ದಾನೆ.

error: Content is protected !!