ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಸ್ಬೇನ್‌ನ ‘ದಿ ಗಬ್ಬಾ’ ಮೈದಾನದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ನ 6ನೇ ಪಂದ್ಯವು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಪಂದ್ಯಕ್ಕೆ ಸಾಕ್ಷಿಯಾಯಿತು. ಬ್ರಿಸ್ಬೇನ್ ಹೀಟ್ ತಂಡವು ಅಸಾಧ್ಯವೆನ್ನಬಹುದಾದ ಗುರಿಯನ್ನು ಬೆನ್ನಟ್ಟಿ, ವಿಶ್ವ ದಾಖಲೆಗಳ ಮಳೆಯನ್ನು ಸುರಿಸಿದೆ.
ಮೊದಲು ಬ್ಯಾಟ್ ಮಾಡಿದ ಪರ್ತ್ ಸ್ಕಾಚರ್ಸ್ ತಂಡವು ಫಿನ್ ಅಲೆನ್ (79 ರನ್) ಮತ್ತು ಕೂಪರ್ ಕೊನೊಲಿ (77 ರನ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ ಬರೋಬ್ಬರಿ 257 ರನ್ ಕಲೆಹಾಕಿತು.
258 ರನ್ ಗಳ ಗುರಿ ಬೆನ್ನತ್ತಿದ ಬ್ರಿಸ್ಬೇನ್ ಹೀಟ್ ತಂಡಕ್ಕೆ ಆರಂಭದಲ್ಲಿ ಆಘಾತ ಎದುರಾಯಿತು. ನಾಯಕ ಕಾಲಿನ್ ಮನ್ರೊ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಆದರೆ, ನಂತರ ಜೊತೆಗೂಡಿದ ಜ್ಯಾಕ್ ವೈಲ್ಡರ್ಮತ್ (110) ಮತ್ತು ಮ್ಯಾಟ್ ರೆನ್ಶಾ (102) ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಟಿ20 ಇತಿಹಾಸದಲ್ಲೇ ಚೇಸಿಂಗ್ ವೇಳೆ ಇಬ್ಬರು ಬ್ಯಾಟರ್‌ಗಳು ಶತಕ ಸಿಡಿಸಿದ ಮೊದಲ ಘಟನೆ ಇದಾಗಿದೆ. ವೈಲ್ಡರ್ಮತ್ ಮತ್ತು ರೆನ್ಶಾ ನಡುವೆ ಮೂಡಿಬಂದ 212 ರನ್ಗಳ ಜೊತೆಯಾಟವು ಬಿಗ್ ಬ್ಯಾಷ್ ಇತಿಹಾಸದಲ್ಲೇ ಗರಿಷ್ಠ ರನ್ ಮೊತ್ತವಾಗಿದೆ.
ಇದು ಟಿ20 ಕ್ರಿಕೆಟ್ ಇತಿಹಾಸದ 3ನೇ ಅತ್ಯುನ್ನತ ಚೇಸಿಂಗ್ ಆಗಿದೆ (ಮೊದಲ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್-262 ರನ್, ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ-259 ರನ್).
ಈ ಗೆಲುವಿನೊಂದಿಗೆ ಬ್ರಿಸ್ಬೇನ್ ಹೀಟ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. 19.5 ಓವರ್‌ಗಳಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ, ಟಿ20 ಕ್ರಿಕೆಟ್ ಎಂದರೆ ಕೇವಲ ಬ್ಯಾಟರ್‌ಗಳ ಆಟ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

