Saturday, December 20, 2025

ಡಿಸೆಂಬರ್ ಮೂರನೇ ವಾರ OTTಗೆ ಬರ್ತಿದೆ ಕೆಲವು ಇಂಟ್ರೆಸ್ಟಿಂಗ್ ಸಿನಿಮಾ: ನೀವೂ ನೋಡಿ ಎಂಜಾಯ್ ಮಾಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಸೆಂಬರ್ ತಿಂಗಳು ಎಂದರೆ ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳ ಸಂಭ್ರಮ ಸಹಜ. ಈ ಕಾರಣದಿಂದಾಗಿ ಈ ವಾರ ಓಟಿಟಿ ವೇದಿಕೆಗಳಲ್ಲಿ ಭಾರೀ ಬಜೆಟ್ ಅಥವಾ ಅತಿಹೆಚ್ಚು ಪ್ರಚಾರ ಪಡೆದ ಸಿನಿಮಾಗಳು ಬಿಡುಗಡೆಯಾಗಿಲ್ಲ. ಆದರೆ ಕಥಾ ವೈವಿಧ್ಯತೆಯೊಂದಿಗೆ ಕೆಲವು ಗಮನಾರ್ಹ ಸಿನಿಮಾಗಳು ಮತ್ತು ವೆಬ್ ಸರಣಿಗಳು ಈ ವಾರ ಡಿಜಿಟಲ್ ಪ್ರೇಕ್ಷಕರ ಮುಂದೆ ಬಂದಿವೆ.

ರಶ್ಮಿಕಾ ಮಂದಣ್ಣ ಅಭಿನಯದ ಹಿಂದಿ ಹಾರರ್ ಸಿನಿಮಾ ‘ಥಾಮ’ ಡಿಸೆಂಬರ್ 16ರಂದು ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆಯಾಗಿದೆ. ಆಯುಷ್ಮಾನ್ ಖುರಾನಾ ಹಾಗೂ ನವಾಜುದ್ದೀನ್ ಸಿದ್ಧಿಖಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಲಯಾಳಂ ಚಿತ್ರರಂಗದ ಹಿರಿಯ ನಟ ಮಮ್ಮುಟಿ ಅಭಿನಯದ ‘ಡಾಮಿನಿಕ್ ಅಂಡ್ ಲೇಡೀಸ್ ಪರ್ಸ್’ ಥ್ರಿಲ್ಲರ್ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದ್ದು, ಥ್ರಿಲ್ಲರ್ ಕಥಾ ಹಂದರದಿಂದ ಗಮನ ಸೆಳೆಯುತ್ತಿದೆ.

ಇದೇ ವೇಳೆ ತಮಿಳಿನ ಫೀಲ್‌ಗುಡ್ ಪ್ರೇಮಕಥೆ ‘ಅರೊಮಲೈ’ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿ ಪ್ರೇಮ ಕಥೆಗಳ ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತಿದೆ.

ಮಾಧುರಿ ದೀಕ್ಷಿತ್ ನಟಿಸಿರುವ ಥ್ರಿಲ್ಲರ್ ವೆಬ್ ಸರಣಿ ‘ಮಿಸಸ್ ದೇಶಪಾಂಡೆ’ ಕೂಡ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದು, ಸೀರಿಯಲ್ ಕಿಲ್ಲರ್ ಕಥಾವಸ್ತುವಿನ ಮೂಲಕ ಕುತೂಹಲ ಮೂಡಿಸಿದೆ.

ಮನರಂಜನೆಯ ವಿಭಾಗದಲ್ಲಿ ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಾಲ್ಕನೇ ಸೀಸನ್ ಡಿಸೆಂಬರ್ 20ರಿಂದ ಆರಂಭವಾಗಿದ್ದು, ಹಾಸ್ಯದ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿದೆ.

error: Content is protected !!