ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಬಹುನಿರೀಕ್ಷಿತ 8 ಪಂದ್ಯಗಳ ಸರಣಿಯು ಜನವರಿ 11 ರಿಂದ ಪ್ರಾರಂಭವಾಗಲಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮೊದಲು ಏಕದಿನ ಪಂದ್ಯಗಳು ನಡೆಯಲಿದ್ದು, ಆ ನಂತರ ಟಿ20 ಸರಣಿ ಜರುಗಲಿದೆ. ವಿಶೇಷವೆಂದರೆ, ಇದೇ ತಂಡವು ಫೆಬ್ರವರಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲೂ ಭಾಗವಹಿಸಲಿದೆ.
ತಂಡದಲ್ಲಿ ಮಹತ್ವದ ಬದಲಾವಣೆಗಳು
ಟಿ20 ಸರಣಿಗಾಗಿ ಬಿಸಿಸಿಐ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಆಲ್-ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉಪನಾಯಕನಾಗಿದ್ದ ಶುಭ್ಮನ್ ಗಿಲ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಜಾಗಕ್ಕೆ ಇಶಾನ್ ಕಿಶನ್ ಮರಳಿದ್ದಾರೆ. ಇನ್ನು ಜಿತೇಶ್ ಶರ್ಮಾ ಬದಲಿಗೆ ಫಿನಿಶರ್ ರಿಂಕು ಸಿಂಗ್ ಸ್ಥಾನ ಪಡೆದಿದ್ದಾರೆ.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
ಸರಣಿಯ ವೇಳಾಪಟ್ಟಿ
ಏಕದಿನ ಸರಣಿ (ಮಧ್ಯಾಹ್ನ 1:30ಕ್ಕೆ ಪ್ರಾರಂಭ)
ಜನವರಿ 11: ಮೊದಲ ಏಕದಿನ – ವಡೋದರಾ
ಜನವರಿ 14: ಎರಡನೇ ಏಕದಿನ – ರಾಜ್‌ಕೋಟ್
ಜನವರಿ 18: ಮೂರನೇ ಏಕದಿನ – ಇಂದೋರ್
ಟಿ20 ಸರಣಿ (ರಾತ್ರಿ 7:00ಕ್ಕೆ ಪ್ರಾರಂಭ)
ಜನವರಿ 21: ಮೊದಲ ಟಿ20 – ನಾಗ್ಪುರ
ಜನವರಿ 23: ಎರಡನೇ ಟಿ20 – ರಾಯ್ಪುರ
ಜನವರಿ 25: ಮೂರನೇ ಟಿ20 – ಗುವಾಹಟಿ
ಜನವರಿ 28: ನಾಲ್ಕನೇ ಟಿ20 – ವಿಶಾಖಪಟ್ಟಣ
ಜನವರಿ 31: ಐದನೇ ಟಿ20 – ತಿರುವನಂತಪುರಂ

