ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ಎದ್ದಿರುವ ಚರ್ಚೆಗಳು ಈಗ ದೆಹಲಿ ಮೆಟ್ಟಿಲೇರಿವೆ. ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಆರ್. ಸುದರ್ಶನ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಹತ್ವದ ಪತ್ರವೊಂದನ್ನು ಬರೆದಿದ್ದಾರೆ.
ಪಕ್ಷದ ಪದಾಧಿಕಾರಿಗಳ ಪರವಾಗಿ ಈ ಪತ್ರ ಬರೆದಿರುವ ಸುದರ್ಶನ್, ರಾಜ್ಯ ಘಟಕದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಅನಿಶ್ಚಿತತೆಯನ್ನು ತಕ್ಷಣವೇ ಕೊನೆಗಾಣಿಸುವಂತೆ ಒತ್ತಾಯಿಸಿದ್ದಾರೆ. ದಿನಕ್ಕೊಂದು ಹೇಳಿಕೆ, ನಾಯಕತ್ವದ ಕುರಿತ ಗೊಂದಲಗಳು ಸರ್ಕಾರದ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತಿರುವುದಲ್ಲದೆ, ಸಾರ್ವಜನಿಕವಾಗಿ ಪಕ್ಷದ ಘನತೆಗೂ ಕುಂದು ತರುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಮಧ್ಯಪ್ರವೇಶಿಸಿ ಈ ಗೊಂದಲಗಳಿಗೆ ಆದಷ್ಟು ಬೇಗ ‘ಪೂರ್ಣವಿರಾಮ’ ಹಾಕಬೇಕು ಎಂಬುದು ಪತ್ರದ ಮುಖ್ಯ ಆಶಯವಾಗಿದೆ.

