ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಿನಿಮಾ ಇಂಡಸ್ಟ್ರಿ, ತೆಲುಗು ಇಂಡಸ್ಟ್ರಿ, ಬಾಲಿವುಡ್, ಕಾಲಿವುಡ್ ಹೀಗೆ ಸಾಕಷ್ಟು ಸಿನಿಮಾ ಇಂಡಸ್ಟ್ರಿಗಳಿವೆ. ಅದರಲ್ಲಿ ಸಾಕಷ್ಟು ಸ್ಟಾರ್‌ಗಳಿದ್ದಾರೆ. ಆದರೆ ಇತ್ತೀಚೆಗೆ ಎಲ್ಲ ದೊಡ್ಡ ಡೈರೆಕ್ಟರ್, ದೊಡ್ಡ ಪ್ರೊಡಕ್ಷನ್ ಹೌಸ್‌ಗಳು ಎಂಟ್ರಿ ನೀಡಿದ್ದು, ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳು ಹಿಟ್ ಆಗುತ್ತಿದ್ದು, ಸೌತ್-ನಾರ್ಥ್ ಎಂದು ಜನ ಮಾತನಾಡುತ್ತಿಲ್ಲ. ಸಿನಿಮಾ ಎಂದಷ್ಟೇ ಗುರುತಿಸುತ್ತಿದ್ದಾರೆ. ಈ ವರ್ಷದಲ್ಲಿ ಬಾಲಿವುಡ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಬಾಲಿವುಡ್‌ಗೆ ಕಾಲಿಟ್ಟ ಸೆಲೆಬ್ರಿಟಿಗಳಿವರು..
ಬಾಲಿವುಡ್‌ನಿಂದ ಕನ್ನಡಕ್ಕೆ
ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ಕಿಯಾರಾ ಅಡ್ವಾಣಿ ಅವರು ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಈ ಬಹುನಿರೀಕ್ಷಿತ ಚಿತ್ರ ಮಾರ್ಚ್ 19, 2026ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

2025ರ ಅತ್ಯಂತ ಯಶಸ್ವಿ ಸಿನಿಮಾ ‘ಕಾಂತಾರ ಚಾಪ್ಟರ್ 1’ರ ಮೂಲಕ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಸ್ಯಾಂಡಲ್ವುಡ್ ಪ್ರವೇಶಿಸಿದ್ದಾರೆ. ಕರ್ನಾಟಕದವರೇ ಆಗಿರುವ ನಟ ಗುಲ್ಶನ್ ದೇವಯ್ಯ ಬಾಲಿವುಡ್ನಲ್ಲಿ ವಿಭಿನ್ನ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಈ ವರ್ಷ ಕಾಂತಾರ ಪ್ರೀಕ್ವೆಲ್ನಲ್ಲಿ ‘ಕುಲಶೇಖರ’ ಪಾತ್ರ ನಿರ್ವಹಿಸಿ ಯಶಸ್ಸು ಕಂಡಿದ್ದಾರೆ. ಹಿಂದಿ ಪ್ರತಿಭೆ ಗುಲ್ಶನ್ ದೇವಯ್ಯ ಮೂಲತಃ ಕೊಡಗು ಮೂಲದ ಕುಟುಂಬಕ್ಕೆ ಸೇರಿದವರು.

ಕನ್ನಡದಿಂದ ಬಾಲಿವುಡ್‌ಗೆ
ಬಿಡುಗಡೆ ಹೊಸ್ತಿಲಿನಲ್ಲಿರುವ ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯಭೂಮಿಕೆಯ ‘ಮಾರ್ಕ್’ ಚಿತ್ರದಲ್ಲಿ ಮೈಸೂರು ಮೂಲದ ರೋಶಿನಿ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದ್ದು, ರೋಶಿನಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲು ಸಜ್ಜಾಗಿದ್ದಾರೆ.

ಭಾರತೀಯ ಚಿತ್ರರಂಗದ ಮಹತ್ವಾಕಾಂಕ್ಷೆಯ ಸಿನಿಮಾ ‘ರಾಮಾಯಣ’ದ 3 ನಿಮಿಷಗಳ ಮೊದಲ ನೋಟ ಜುಲೈ 3ರಂದು ಬಿಡುಗಡೆಯಾಯಿತು. ಬಾಲಿವುಡ್ನ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ನಟ ಯಶ್ ಅವರು ರಣ್ಬೀರ್ ಕಪೂರ್, ಸಾಯಿ ಪಲ್ಲವಿ ಅವರ ಜೊತೆ ತೆರೆಹಂಚಿಕೊಂಡಿದ್ದಾರೆ. ರಾವಣನಾಗಿ ಯಶ್ ಕಾಣಿಸಿಕೊಳ್ಳುತ್ತಿದ್ದು, 2026ರ ದೀಪಾವಳಿ ಸಂದರ್ಭದಲ್ಲಿ ಪಾರ್ಟ್ 1 ತೆರೆಕಾಣಲಿದೆ.

ಈ ಸಾಲಿನ ಅತ್ಯಂತ ಯಶಸ್ವಿ ನಟಿಯಾಗಿ ರುಕ್ಮಿಣಿ ವಸಂತ್ ಹೊರಹೊಮ್ಮಿದ್ದಾರೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಈ ವರ್ಷದ ಅತ್ಯಂತ ಯಶಸ್ವಿ, ನಂಬರ್ ಒನ್ ಸಿನಿಮಾವಾಗಿ ಹೆಸರು ಮಾಡಿರುವ ‘ಕಾಂತಾರ ಚಾಪ್ಟರ್ 1’ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

ತೆಲುಗು ಮತ್ತು ಬಾಲಿವುಡ್ನ ಪ್ಯಾನ್ ಇಂಡಿಯಾ ಚಿತ್ರಗಳಾದ ಜೈ ಹನುಮಾನ್, ಛತ್ರಪತಿ ಶಿವಾಜಿ ಮಹಾರಾಜ ಸಿನಿಮಾಗಳು ಕಳೆದ ವರ್ಷವೇ ಘೋಷಣೆಯಾಗಿವೆ. 2025ರಲ್ಲಿ ರಿಷಬ್ ಶೆಟ್ಟಿ, ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾದ ಹಿನ್ನೆಲೆ ಈ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ.


