Wednesday, December 24, 2025

ನ್ಯೂ ಇಯರ್‌ ಪಾರ್ಟಿ ಹೆಸರಲ್ಲಿ ಕುಡಿದು ತೂರಾಡಿ ಡ್ರಾಮಾ ಮಾಡಿದ್ರೆ ಹುಷಾರ್‌! ಪೊಲೀಸರಿಂದ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಸ ವರ್ಷಾಚರಣೆಗೆ ದಿನಗಣನೆ ಶುರುವಾಗಿದೆ. ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ಇನ್ನು ಪಬ್‌ ಹಾಗೂ ಬಾರ್‌ಗಳಲ್ಲಿಯೂ ಎಣ್ಣೆ ಪಾರ್ಟಿ ನಡೆಯಲಿದೆ. ಈ ವೇಳೆ ಸಾಕಷ್ಟು ಮಂದಿ ಕುಡಿತವನ್ನು ಅಡ್ವಾಂಟೇಜ್‌ ಮಾಡಿಕೊಂಡು ಡ್ರಾಮಾ ಮಾಡುತ್ತಾರೆ. ಆದರೆ ಈ ನಡವಳಿಕೆಗೆ ಹೊಸ ವರ್ಷಾಚರಣೆಯಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಆಚರಣೆ ವೇಳೆ ಯಾವುದೇ ಅಹಿತರ ಘಟನೆಗಳು ಹಾಗೂ ಅಕ್ರಮ ಚಟುವಟಿಕೆಗಳು ನಡೆಯದಂತೆ ಬೆಂಗಳೂರು ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಬೆಂಗಳೂರು ಕಮಿಷನರ್ ಸೀಮಂತ್​​ ಕುಮಾರ್, ಸೆಲೆಬ್ರೇಷನ್ ವೇಳೆ ಅನುಚಿತ ವರ್ತನೆ, ಗಲಾಟೆ ಮಾಡುವವರಿಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಹೊಸ ವರ್ಷ ವರ್ಷಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆ ಬೆಂಗಳೂರು ಕಮಿಷನರ್​ ಸೀಮಂತ್​ ಮಾರ್​ ಅವರು ಬುಲೆಟ್ ಬೈಕ್ ಹತ್ತಿ ಸಿಟಿ ರೌಂಡ್ಸ್​ ಹಾಕಿದ್ರು.  ಹೊಸ ವರ್ಷದ ಜಾಗೃತೆ ಕ್ರಮ ಪರಿಶೀಲನೆ ನಡೆಸಿದ್ರು. ಹಿರಿಯ ಅಧಿಕಾರಗಳ ಜೊತೆ ಟ್ರಿನಿಟಿ ಸರ್ಕಲ್​ನಿಂದ ಎಂ.ಜಿ ರೋಡ್ ಬ್ರಿಗೇಡ್ ರೋಡ್​​ಗೆ ಭೇಟಿ  ನೀಡಿ ಪರಿಶೀಲನೆ ನಡೆಸಿದರು.

error: Content is protected !!