Thursday, December 25, 2025

ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ನಾಲ್ವರು ಮಾವೋವಾದಿಗಳು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಡಿಶಾದಲ್ಲಿ ಗುರುವಾರ ಭದ್ರತಾ ಪಡೆಗಳು‌ ನಡೆಸಿದ ಎನ್‌ಕೌಂಟರ್‌ನಲ್ಲಿ ತೆಲುಗು ಮಾವೋವಾದಿಗಳ ಉನ್ನತ ಕಮಾಂಡರ್‌ ಹತ್ಯೆಯಾಗಿದ್ದಾನೆ.

ಸಿಪಿಐ (ಮಾವೋವಾದಿ) ನ ಉನ್ನತ ಶ್ರೇಣಿಯ ಕೇಂದ್ರ ಸಮಿತಿ ಸದಸ್ಯ ಮತ್ತು ಅದರ ಒಡಿಶಾ ಕಾರ್ಯಾಚರಣೆಗಳ ಮುಖ್ಯಸ್ಥ ಗಣೇಶ್ ಉಯಿಕೆ (69)ನನ್ನು ಕಂಧಮಲ್ ಮತ್ತು ಗಂಜಾಂ ಜಿಲ್ಲೆಗಳ ಗಡಿಯಲ್ಲಿರುವ ರಾಂಪಾ ಅರಣ್ಯ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತಂಡಗಳು ಹತ್ಯೆ ಮಾಡಿವೆ.

ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ಕಾರ್ಯಕರ್ತರು ಸೇರಿದಂತೆ ಇತರ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಗುರುವಾರದ ಕಾರ್ಯಾಚರಣೆಯು ಇತ್ತೀಚಿನ ವರ್ಷಗಳಲ್ಲಿ ಮಾವೋವಾದಿ ವಿರುದ್ಧದ ದಂಗೆಗಳಲ್ಲಿ ಪ್ರಮುಖದ್ದಾಗಿದೆ.

error: Content is protected !!