ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಹಾಗೂ ‘ಶೋ ಮ್ಯಾನ್’ ಪ್ರೇಮ್ ಕಾಂಬಿನೇಷನ್‌ನ ಬೃಹತ್ ಸಿನಿಮಾ ‘ಕೆಡಿ’ ಯಾವಾಗ ತೆರೆಗೆ ಬರಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಹವಾ ಸೃಷ್ಟಿಯಾಗಿದ್ದು, ಈಗ ಚಿತ್ರತಂಡ ಅಧಿಕೃತವಾಗಿ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ.
ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಕೆಡಿ’ ಸಿನಿಮಾ 2026ರ ಏಪ್ರಿಲ್ 30ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಬೇಸಿಗೆಯ ಸಂಭ್ರಮದ ನಡುವೆಯೇ ಧ್ರುವ ಸರ್ಜಾ ಅವರ ರಗಡ್ ಅವತಾರ ಬೆಳ್ಳಿ ಪರದೆಯ ಮೇಲೆ ರಾರಾಜಿಸಲಿದೆ.
ಈ ವಿಶೇಷ ಸುದ್ದಿಯ ಜೊತೆಗೆ ಚಿತ್ರದ ಮೂರನೇ ಹಾಡು `ಅಣ್ತಮ್ಮ ಜೋಡೆತ್ತು ಕಣೋʼ ಬಿಡುಗಡೆಯಾಗಿದೆ. ಮಂಜುನಾಥ್ ಅವರ ಸಾಹಿತ್ಯವಿರುವ ಈ ಭಾವನಾತ್ಮಕ ಹಾಗೂ ಖಡಕ್ ಹಾಡಿಗೆ ಸ್ವತಃ ನಿರ್ದೇಶಕ ಪ್ರೇಮ್ ಧ್ವನಿಯಾಗಿದ್ದಾರೆ. ಅಣ್ಣ-ತಮ್ಮಂದಿರ ಬಾಂಧವ್ಯವನ್ನು ಸಾರುವ ಈ ಗೀತೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬರೀ ಧ್ರುವ ಸರ್ಜಾ ಮಾತ್ರವಲ್ಲದೆ, ದಕ್ಷಿಣ ಮತ್ತು ಉತ್ತರ ಭಾರತದ ದೊಡ್ಡ ತಾರಾಬಳಗವೇ ಇದೆ.
ಒಟ್ಟಿನಲ್ಲಿ, ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿರುವ ‘ಕೆಡಿ’, ಏಪ್ರಿಲ್ ತಿಂಗಳಾಂತ್ಯಕ್ಕೆ ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ಸಜ್ಜಾಗಿದೆ.

