Friday, December 26, 2025

ನಮ್ಮ ಸಾಧನೆಗಳ ಕ್ರೆಡಿಟ್‌ನ್ನು ಅಶ್ವಿನಿ ವೈಷ್ಣವ್‌ ತಗೋತಿದಾರೆ: ಸಿಎಂ ಸಿದ್ದು ಗುಸ್ಸಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಸಾಧನೆಗಳ ಕ್ರೆಡಿಟ್ ತೆಗೆದುಕೊಳ್ಳುವ ಮೂಲಕ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ‘ಕರ್ನಾಟಕದ ಯಶಸ್ಸನ್ನು ಕದಿಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಡಬಲ್ ಎಂಜಿನ್ ಸರ್ಕಾರ’ ಇರುವ ರಾಜ್ಯಗಳಲ್ಲಿ ಕರ್ನಾಟಕದ ಈ ಪ್ರಗತಿ ಸಾಧಿಸಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಘಟಕ ತೆರೆದ 8-9 ತಿಂಗಳಲ್ಲಿ 30 ಸಾವಿರ ಮಂದಿಗೆ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಂಪನಿ ಉದ್ಯೋಗ ನೀಡಿದ ಸುದ್ದಿಯನ್ನು ಹಂಚಿಕೊಂಡ ರಾಹುಲ್‌ ಗಾಂಧಿ ಇದು ಕರ್ನಾಟಕ ಮಾದರಿ ಎಂದು ಟ್ವೀಟ್ ಮಾಡಿದ್ದರು. ಈ ಪೋಸ್ಟ್‌ಗೆ ಅಶ್ವಿನಿ ವೈಷ್ಣವ್‌ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಯಶಸ್ಸನ್ನು ಒಪ್ಪಿಕೊಂಡಿದ್ದಕ್ಕಾಗಿ ರಾಹುಲ್‌ ಗಾಂಧಿಗೆ ಧನ್ಯವಾದಗಳು. ನೀವು ಗಮನಿಸಿದಂತೆ ನಮ್ಮ ಪ್ರಧಾನಿಯವರ ದೃಷ್ಟಿಕೋನವನ್ನು ನಾವು ಕಾರ್ಯಗತಗೊಳಿಸುತ್ತಿದ್ದಂತೆ ನಾವು ಉತ್ಪಾದಕ ಆರ್ಥಿಕತೆಯಾಗುತ್ತಿದ್ದೇವೆ ಬರೆದು ಟಾಂಗ್‌ ನೀಡಿದ್ದರು.

error: Content is protected !!