Friday, December 26, 2025

CINE | ಈ ವರ್ಷದ ಸಿನಿಮಾಗಳಲ್ಲಿ ʼಸ್ತ್ರೀʼಶಕ್ತಿ ಪ್ರದರ್ಶಿಸಿದ ಹೀರೋಗಳಿವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ವರ್ಷ ತೆರೆಕಂಡ ಮೂರು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಒಂದು ವಿಷಯ ಕಾಮನ್‌ ಆಗಿದೆ. ಅದೇನೆಂದರೆ ಸಿನಿಮಾದ ಮುಖ್ಯ ಮೇಲ್‌ ಕ್ಯಾರೆಕ್ಟರ್‌ ಸ್ತ್ರೀವೇಶ ಧರಿಸಿರುವುದು. ಮೂರು ಹಿಟ್‌ ಸಿನಿಮಾಗಳು, ಮೂರು ಹಿಟ್‌ ಪಾತ್ರಗಳು ಯಾವುದು ನೋಡಿ..

ಅಕ್ಟೋಬರ್​​ 2ರಂದು ತೆರೆಕಂಡ ಕಾಂತಾರ ಚಾಪ್ಟರ್​ 1ರ ಕ್ಲೈಮ್ಯಾಕ್ಸ್​ನಲ್ಲಿ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಚಾಮುಂಡಿ ದೇವಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದೈವ, ದೇವಿ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಗುಳಿಗ, ಪಂಜುರ್ಲಿ ದೈವಗಳೊಂದಿಗೆ ದೃಶ್ಯವೊಂದರಲ್ಲಿ ಶಕ್ತಿಶಾಲಿ ದೇವತೆ ಚಾಮುಂಡಿಯ ಆಹ್ವಾಹನೆಯೂ ಆಗಿದೆ. ದುಷ್ಟರನ್ನು ನಾಶಮಾಡುವ ದೈವಿಕ ಶಕ್ತಿಯನ್ನು ಇಲ್ಲಿ ಪ್ರತಿನಿಧಿಸಲಾಗಿದೆ. ಚಿತ್ರದುದ್ದಕ್ಕೂ ದೈವಗಳ ಮಹತ್ವ ಸಾರಿದ್ದು, ಕ್ಲೈಮ್ಯಾಕ್ಸ್​ನಲ್ಲಿ ಬರುವ ಚಾಮುಂಡಿ ದೃಶ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತ್ತು.

ಅತಿ ಕಡಿಮೆ ಬಜೆಟ್​​ನಲ್ಲಿ ನಿರ್ಮಾಣಗೊಂಡು ನಿರೀಕ್ಷೆಗೂ ಮೀರಿದ ಕಲೆಕ್ಷನ್​ ಮಾಡಿದ ಈ ವರ್ಷದ ಕನ್ನಡ ಸಿನಿಮಾ ‘ಸು ಫ್ರಮ್​ ಸೋ’. ಜುಲೈ 25ರಂದು ಕನ್ನಡದಲ್ಲಿ ಬಿಡುಗಡೆಯಾದ ಈ ಕಂಟೆಂಟ್​ ಸಿನಿಮಾ, ಕೆಲವೇ ದಿನಗಳಲ್ಲಿ ಬಹುಭಾಷೆಗಳಲ್ಲಿಯೂ ತೆರೆಕಂಡು ಸೂಪರ್​ ಹಿಟ್ ಆಗಿದೆ. ಸ್ಥಳೀಯ ಕಾನ್ಸೆಪ್ಟ್​ ಒಳಗೊಂಡ ಕಾಮಿಡಿ ಡ್ರಾಮಾವನ್ನು ಜೆ.ಪಿ.ತುಮಿನಾಡ್​​ ನಿರ್ದೇಶಿಸಿ, ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರ ಅಶೋಕ (ಜೆ.ಪಿ ತುಮಿನಾಡ್)ನನ್ನು ಆವರಿಸಿದ್ದ (ಅಸಲಿಗೆ ಯಾವುದೇ ಪ್ರೇತ ಇರಲಿಲ್ಲ) ಸೋಮೇಶ್ವರದ ಸುಲೋಚನಾ ಎಂಬ ಪ್ರೇತವನ್ನು ಓಡಿಸುವ ಕಠಿಣ ಕೆಲಸವನ್ನು ಗ್ರಾಮಸ್ಥರು ಮಾಡುತ್ತಾರೆ. ಇಲ್ಲಿ ಗಂಡಸಿನ ದೇಹದ ಮೇಲೆ ಹೆಣ್ಣು ಪ್ರೇತ ಆಹ್ವಾಹನೆಯಾಗುತ್ತದೆ, ಕ್ಲೈಮ್ಯಾಕ್ಸ್​ನಲ್ಲಿ ಲೇಡಿ ಗೆಟಪ್​ನಲ್ಲೇ ಜೆ.ಪಿ.ತುಮಿನಾಡ್ ಸ್ತ್ರೀಶಕ್ತಿ ಪ್ರದರ್ಶಿಸಿದ್ದಾರೆ. 

ಕ್ರಿಸ್ಮಸ್​​ಗೆ ತೆರೆಕಂಡಿರುವ 45 ಶೀರ್ಷಿಕೆಯ ಚಿತ್ರದಲ್ಲಿ ಶಿವಣ್ಣ ಲೇಡಿ ಗೆಟಪ್​ನಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಕ್ಲೈಮಾಕ್ಸ್​​ನಲ್ಲಿ ಬರುವ ಅವರ 11 ಅವತಾರಗಳಲ್ಲಿ ಲೇಡಿ ಗೆಟಪ್ ಕೂಡಾ ಒಂದು. ಅತ್ಯಂತ ರೂಪವತಿಯಾಗಿ ಹ್ಯಾಟ್ರಿಕ್​ ಹೀರೋ ಕಾಣಿಸಿಕೊಂಡಿದ್ದು ಇಂಥ ಸಿನಿಮಾವನ್ನು ಈವರೆಗೆ ನೋಡೇ ಇರಲಿಲ್ಲ ಎನ್ನುವಂಥ ಅಭಿಪ್ರಾಯಗಳು ಹೆಚ್ಚು ಕೇಳಿಬಂದಿವೆ. 

error: Content is protected !!