Saturday, December 27, 2025

ನಾರ್ಥ್‌ಗಿಂತ ಸೌತ್‌ ಸೇಫ್‌! ಹೆಣ್ಮಕ್ಕಳು ವಾಸಿಸೋಕೆ ಬೆಂಗಳೂರು ಬೆಸ್ಟ್‌ ಎಂದ ದೆಹಲಿ ಲೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಿಳೆಯರು ಇನ್ನೂ ಸಹ ದೇಶದ ರಾಜಧಾನಿಯಾದ ದೆಹಲಿಯಲ್ಲಿ ರಾತ್ರಿ ಹೊತ್ತಿನಲ್ಲಿ ಒಂಟಿಯಾಗಿ ಓಡಾಡಲು ಸುರಕ್ಷಿತ ಅಂತ ಭಾವಿಸುವುದಿಲ್ಲ. ಈ ಮಾತನ್ನು ಇದೀಗ ಖುದ್ದು ದೆಹಲಿಯಿಂದ ಬಂದು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಹೇಳಿದ್ದಾರೆ.

ಮಹಿಳೆಯರು ಓಡಾಡೋಕೆ ಸೇಫ್ಟಿ ಇದೆ, ಗಾಳಿ ಸ್ವಚ್ಛಂದವಾಗಿದೆ. ದೆಹಲಿಯಲ್ಲ, ನಮ್ಮ ಬೆಂಗಳೂರು ದೇಶದ ರಾಜಧಾನಿ ಆಗಬೇಕು ಎಂದಿದ್ದಾರೆ. ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್‌ ಆಗಿದೆ.


ದೆಹಲಿಯಲ್ಲಿ ರಾತ್ರಿ ಓಡಾಡೋಕೆ ಭಯವಾಗುತ್ತದೆ, ಆದರೆ ಬೆಂಗಳೂರಿನಲ್ಲಿ ರಾತ್ರಿ ಓಡಾಡೋದಕ್ಕೆ ಸೇಫ್‌ ಎನಿಸುತ್ತದೆ. ಶುದ್ಧಗಾಳಿ, ಒಳ್ಳೆ ರಸ್ತೆ, ಲೇಟ್‌ನೈಟ್‌ನಲ್ಲಿ ಬಸ್‌ ವ್ಯವಸ್ಥೆ ಎಲ್ಲವೂ ಬೆಂಗಳೂರಿನಲ್ಲಿ ಇದೆ ಎಂದಿದ್ದಾರೆ.

ಇದಕ್ಕೆ ಬೆಂಗಳೂರಿನ ಹಲವರು ಖುಷಿ ಪಟ್ಟಿದ್ದು, ಕೆಲವರು ಮಾತ್ರ ಬೆಂಗಳೂರನ್ನು ಹಾಗೇ ಇರೋದಕ್ಕೆ ಬಿಡಿ, ಕ್ಯಾಪಿಟಲ್‌ ಮಾಡಿ ಇದನ್ನೂ ಡೆಲ್ಲಿಯಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

error: Content is protected !!