Saturday, December 27, 2025

ದೆಹಲಿ ತಲುಪಿದ ದಲಿತ ಸಿಎಂ ಕೂಗು: ಜಿ.ಪರಮೇಶ್ವರ್ ಗೆ ಅವಕಾಶ ಕೊಡಿ ಎಂದ ಸಮಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಚರ್ಚೆ ಮುಂದುವರಿದಿರುವ ಬೆನ್ನಲ್ಲೇ, ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಆಗ್ರಹ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಬದಲಾವಣೆ ಅನಿವಾರ್ಯವಾದರೆ, ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಅವಕಾಶ ನೀಡಬೇಕೆಂದು ಡಾ. ಬಿಆರ್ ಅಂಬೇಡ್ಕರ್ ದಲಿತಾ ಸೇವಾ ಸಮಿತಿ ಒತ್ತಾಯಿಸಿದೆ.

ದೆಹಲಿಯ ಎಐಸಿಸಿ ಕಚೇರಿ ಇಂದಿರಾ ಭವನದ ಬಳಿ ಸಮಿತಿಯ ಸದಸ್ಯರು ಹಾಗೂ ತುಮಕೂರು ಮೂಲದ ಕೆಲ ಕಾಂಗ್ರೆಸ್ ನಾಯಕರು ಸೇರಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಪಕ್ಷದ ಹಿರಿಯ ನಾಯಕನಾಗಿ ಜಿ.ಪರಮೇಶ್ವರ್ ಅವರು ಸಲ್ಲಿಸಿರುವ ಸೇವೆಯನ್ನು ಗಮನಿಸಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ:

ಪ್ರತಿಭಟನೆಗೆ ಮುನ್ನ ಕಾಂಗ್ರೆಸ್ ಸಂಘಟನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನು ವಿವರಿಸಿದರು. ಇದೇ ವೇಳೆ ಸೋನಿಯಾ ಗಾಂಧಿ ಅವರ ನಿವಾಸಕ್ಕೂ ಮನವಿ ಪತ್ರ ಕಳುಹಿಸಲಾಗಿದೆ.

ಎಐಸಿಸಿ ಕಚೇರಿ ಬಳಿ ಮಾತನಾಡಿದ ಮುಖಂಡರು, ದಲಿತ ಸಮುದಾಯವು ದೀರ್ಘಕಾಲದಿಂದ ಕಾಂಗ್ರೆಸ್‌ಗೆ ಅಚಲ ಬೆಂಬಲ ನೀಡುತ್ತಾ ಬಂದಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಜಿ.ಪರಮೇಶ್ವರ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿತ್ತು ಎಂದು ಅವರು ನೆನಪಿಸಿದರು. ಈ ಹಿನ್ನೆಲೆ, ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಪಕ್ಷವು ಸಾಮಾಜಿಕ ನ್ಯಾಯದ ಬದ್ಧತೆಯನ್ನು ತೋರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

error: Content is protected !!