ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ದೇಹದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ನೆಗೆಟಿವ್ ಟ್ರೋಲ್‌ಗಳಿಗೆ ಇದೀಗ ಸಾನ್ವಿಯೇ ಸ್ಪಷ್ಟ ಹಾಗೂ ಖಡಕ್ ಉತ್ತರ ನೀಡಿದ್ದಾರೆ. ತಮ್ಮ ದೇಹವು ಯಾರ ಚರ್ಚೆಯ ವಿಷಯವೂ ಅಲ್ಲ ಎಂದು ಹೇಳುವ ಮೂಲಕ ಟ್ರೋಲರ್‌ಗಳಿಗೆ ತಿರುಗೇಟು ನೀಡಿದ್ದಾರೆ.
ಇನ್ಸ್ಟಾಗ್ರಾಂ ಸ್ಟೋರಿ ಮೂಲಕ ಪ್ರತಿಕ್ರಿಯಿಸಿರುವ ಸಾನ್ವಿ, “ನನ್ನ ದೇಹ ಚರ್ಚೆಗೆ ವಿಷಯವಲ್ಲ. ನಿಮ್ಮ ಅಭಿಪ್ರಾಯ ಬೇಕಾದರೆ ನಾನು ಕೇಳುತ್ತೇನೆ” ಎಂದು ಬರೆದಿದ್ದಾರೆ. ಈ ಸಂದೇಶವು ಕ್ಷಣಾರ್ಧದಲ್ಲಿ ಗಮನ ಸೆಳೆದಿದ್ದು, ಹಲವರ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ:
ಇದಕ್ಕೂ ಮೊದಲು ಶನಿವಾರ ನಡೆದ ‘ಮಾರ್ಕ್’ ಸಿನಿಮಾದ ಕೃತಜ್ಞತಾ ಸುದ್ದಿಗೋಷ್ಠಿಯಲ್ಲಿ, ಸುದೀಪ್ ಅವರಿಗೆ ಪುತ್ರಿಯ ವಿರುದ್ಧದ ನೆಗೆಟಿವ್ ಟ್ರೋಲ್ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, “ನಮಗೆ ಪ್ರೋತ್ಸಾಹ ನೀಡುವವರ ಬಗ್ಗೆ ಮಾತನಾಡೋಣ. ನನ್ನ ಬಗ್ಗೆ ಅಥವಾ ನನ್ನ ಮಗಳ ಬಗ್ಗೆ ನೆಗೆಟಿವ್ ಮಾತನಾಡುವವರ ಬಗ್ಗೆ ಯಾಕೆ ಮಾತನಾಡಬೇಕು?” ಎಂದು ಖಡಕ್ ಆಗಿ ಉತ್ತರಿಸಿದ್ದರು.
ಇನ್ನೂ, “ನನ್ನ ಮಗಳು ಏನು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಅವಳು ನನಗಿಂತಲೂ ಎತ್ತರಕ್ಕೆ ಬೆಳೆಯುತ್ತಾಳೆ” ಎಂದು ಹೇಳಿ ಪುತ್ರಿಯ ಮೇಲಿನ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು.

