ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿಯ ಗಾಳಿ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಗರದ ಹಲವೆಡೆ PM2.5 ಮತ್ತು PM10 ಮಟ್ಟಗಳು ಹೆಚ್ಚಳ ಕಂಡುಬಂದಿದ್ದು, ವಾಯುಮಾಲಿನ್ಯದಿಂದ ನಾಗರಿಕರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಜಿಬಿಎ (GBA) ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರದಿಂದ ಮಹತ್ವದ ಯೋಜನೆ ಪ್ರಾರಂಭಿಸಿದೆ.
ಚೀಫ್ ಕಮಿಷನರ್ ಮಾಹಿತಿಯಂತೆ, ರಸ್ತೆ ಟ್ರಾಫಿಕ್, ಕಟ್ಟಡ ನಿರ್ಮಾಣ ಮತ್ತು ಧೂಳಿನ ಉಳಿಯುವಿಕೆ PM10 ಮಟ್ಟ ಹೆಚ್ಚಾಗುವ ಮುಖ್ಯ ಕಾರಣಗಳಾಗಿವೆ. ನಗರದಲ್ಲಿ 85 ಮೆಟ್ರೋ ಸ್ಟೇಷನ್, 55 BMTC ಮತ್ತು TTMC ಬಸ್ ನಿಲ್ದಾಣಗಳಲ್ಲಿ ಏರ್ ಸೆನ್ಸರ್‌ಗಳನ್ನು ಅಳವಡಿಸಲು ₹15 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈ ಸೆನ್ಸರ್‌ಗಳಿಂದ ಸಂಗ್ರಹಿಸಲಾದ ಡೇಟಾ ವಾಯು ಗುಣಮಟ್ಟ ಮೌಲ್ಯಮಾಪನಕ್ಕೆ ಸಹಾಯ ಮಾಡಲಿದೆ.
ಹೀಗಾಗಿ ನಗರ ವಾಸಿಗಳ ಆರೋಗ್ಯ ಕಾಪಾಡಲು, ಮಾಲಿನ್ಯ ನಿಯಂತ್ರಣದ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಈ ಯೋಜನೆ ಮೂಲಕ ಬೆಂಗಳೂರು ನಗರದ ವಾಯುಮಾಲಿನ್ಯ ಹದಗೆಡುವುದನ್ನು ನಿಗಾ ವಹಿಸಿ ಶುದ್ಧ ಗಾಳಿಯ ಸೌಲಭ್ಯವನ್ನು ನೀಡಲು ಮಹತ್ವದ ಹೆಜ್ಜೆ ಇಡಲಾಗಿದೆ.

