Sunday, December 28, 2025

ಮಲೇಷ್ಯಾದಲ್ಲಿ ‘ಜನ ನಾಯಗನ್’ ಅಬ್ಬರ: ವಿಶ್ವ ದಾಖಲೆ ಬರೆದ ದಳಪತಿ ವಿಜಯ್ ಆಡಿಯೋ ಲಾಂಚ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಕನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಮಲೇಷ್ಯಾದಲ್ಲಿ ಅಕ್ಷರಶಃ ಹೊಸ ಇತಿಹಾಸವನ್ನೇ ಬರೆದಿದೆ. ಡಿಸೆಂಬರ್ 27ರಂದು ನಡೆದ ಈ ಅದ್ಧೂರಿ ಕಾರ್ಯಕ್ರಮವು ಕೇವಲ ಚಲನಚಿತ್ರದ ಪ್ರಚಾರವಾಗಿ ಉಳಿಯದೆ, ಒಂದು ಐತಿಹಾಸಿಕ ಜನಸಾಗರಕ್ಕೆ ಸಾಕ್ಷಿಯಾಯಿತು.

ಈ ಸಮಾರಂಭವು ಮಲೇಷ್ಯಾದಲ್ಲೇ ಅತಿ ಹೆಚ್ಚು ಜನರು ಭಾಗವಹಿಸಿದ ‘ಆಡಿಯೋ ಲಾಂಚ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಅಧಿಕೃತವಾಗಿ ‘ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್’ ಸೇರ್ಪಡೆಯಾಗಿದೆ. ವಿಜಯ್ ಅವರ ಜಾಗತಿಕ ಜನಪ್ರಿಯತೆಗೆ ಈ ದಾಖಲೆಯೇ ಸಾಕ್ಷಿ.

ಕಾರ್ಯಕ್ರಮದ ಆರಂಭದಲ್ಲಿ ವಿಜಯ್ ಅವರ ತಾಯಿ ನೀಡಿದ ವಿಶೇಷ ಪ್ರದರ್ಶನವು ಇಡೀ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅತಿ ಹೆಚ್ಚು ಸದ್ದು ಮಾಡಿದ್ದು ದಳಪತಿ ವಿಜಯ್ ಅವರ ನಡೆ. ವೇದಿಕೆಯ ಮೇಲೆ ಓಡಿಹೋಗಿ ತಮ್ಮ ತಂದೆಯನ್ನು ಪ್ರೀತಿಯಿಂದ ಆಲಂಗಿಸಿಕೊಂಡ ಕ್ಷಣವು ಇಡೀ ಕ್ರೀಡಾಂಗಣದಲ್ಲಿ ಸಂಭ್ರಮದ ಅಲೆ ಎಬ್ಬಿಸಿತು.

ದಾಖಲೆಗಳ ಬೆನ್ನಲ್ಲೇ ಈ ಚಿತ್ರವು ಜನವರಿ 9 ರಂದು ಪೊಂಗಲ್ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ಈ ಆಡಿಯೋ ಲಾಂಚ್ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಮುಗಿಲು ಮುಟ್ಟಿದೆ.

error: Content is protected !!