Sunday, December 28, 2025

ಶರಾವತಿ ಪಂಪ್ಡ್ ಸ್ಟೋರೇಜ್ ಹಾನಿಕಾರಕ ಅಲ್ಲ, ರಾಜ್ಯಕ್ಕೆ ಬಹುದೊಡ್ಡ ಯೋಜನೆ ಜಾರಿ ಆಸ್ತಿ: ಡಿಸಿಎಂ ಡಿಕೆಶಿ ಸ್ಪಷ್ಟೋಕ್ತಿ

ಹೊಸದಿಗಂತ ಕಾರವಾರ:

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಯಾರಿಗೂ ಹಾನಿಕಾರಕ ಅಲ್ಲ. ಇದು ರಾಜ್ಯಕ್ಕೆ ಬಹುದೊಡ್ಡ ಆಸ್ತಿಯಾಗುವ ಯೋಜನೆ. ಇದಕ್ಕೆ ವಿರೋಧ ಸರಿಯಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಪ್ರತಿಪಾದಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ವಿರೋಧಿಸಲಿ, ಬಿಡಲಿ. ರಾಜ್ಯದ ವಿದ್ಯುತ್ ಅಗತ್ಯತೆಯ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿ ಮಾಡಲಿದೆ ಎಂದರು.

ನಾನು ವಿದ್ಯುತ್ ಮಂತ್ರಿ ಆಗಿದ್ದಾಗ ಜರ್ಮನಿ, ಸ್ವಿಜರಲ್ಯಾಂಡ್ ಹೋದಾಗ ನೋಡಿದ್ದೇನೆ. ಶರಾವತಿ ಪ್ರದೇಶದ 100-200 ಎಕರೆ ಪ್ರದೇಶದಲ್ಲಿ ಸ್ಟೋರೇಜ್ ಮಾಡಿ ನೀರು ಸಂಗ್ರಹಿಸಿ ಯೋಜನೆ ನಿರ್ಮಿಸಲಾಗುತ್ತದೆ. ಇದು ಯಾರಿಗೂ ಹಾನಿ ತರಲ್ಲ ಎಂದರು.
ವಿದ್ಯುತ್ ಅಗತ್ಯತೆ ಪೂರೈಸಲು ಇದು ಅನಿವಾರ್ಯ. ಜನ ವಿರೋಧ ಮಾಡತಾರೆ, ಮಾಡಲಿ.ಆದರೆ ಇದು ಹಾನಿಕಾರಕ ಯೋಜನೆ ಅಲ್ಲ. ಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡುವೆ ಎಂದರು.

ಗಂಗಾವಳಿ ಸೇತುವೆ ಉದ್ಘಾಟನೆಗೆ ಶೀಘ್ರ ಬರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಂತ್ರಿ ಮಂಕಾಳ ವೈದ್ಯ, ಶಾಸಕರಾದ ಸತೀಶ ಸೈಲ್,ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕಾರ್ ಮತ್ತಿತರರು ಇದ್ದರು.

error: Content is protected !!