Wednesday, December 31, 2025

ದಿನಭವಿಷ್ಯ: ಆರ್ಥಿಕ ಸ್ಥಿರತೆ, ಮಾನಸಿಕ ತೃಪ್ತಿ ಇಂದು ನಿಮ್ಮದಾಗಲಿದೆ.. ಒತ್ತಡ ಬಿಡಿ, ಪ್ರೀತಿ ಹಂಚಿ!

ಮೇಷ
ಇಂದು ವೃತ್ತಿಯ ಒತ್ತಡ ಬದಿಗಿಡಿ. ಆಗಲೇಬೇಕಾದ ಇತರ ಕಾರ್ಯಕ್ಕೆ ಗಮನ ಕೊಡಿ. ಕುಟುಂಬದ ಜತೆ ಹೆಚ್ಚು ಕಾಲ ಕಳೆಯಿರಿ.
ವೃಷಭ
ನಿಮ್ಮದೇ ಸಮಸ್ಯೆ ಚಿಂತಿಸುತ್ತಾ ಕೂರಬೇಡಿ. ಕುಟುಂಬ ಸದಸ್ಯರಿಗೂ ಒಂದಷ್ಟು ಸಮಯ ಕೊಡಿ. ಬಂಧುವಿನಿಂದ ಒಳ್ಳೆಯ ಸುದ್ದಿ ಸಿಗಬಹುದು.
ಮಿಥುನ
ಮಾಡಲು ತುಂಬ ಕೆಲಸವಿದೆ, ಸಮಯ ಸಾಲದು ಎಂಬ ಕೊರಗು ನಿಮ್ಮದು. ನೀವೇ ಸಮಯ ಮಾಡಿಕೊಳ್ಳಬೇಕು. ಆರ್ಥಿಕ ಗಳಿಕೆ.
ಕಟಕ
ಇತರರಿಗೆ ನಿಮ್ಮ ಗುಟ್ಟು ಬಿಟ್ಟು ಕೊಡಬೇಡಿ. ನಿಮ್ಮ ವಿರುದ್ಧ ಕೆಲವರ ಪಿತೂರಿ ನಡೆಯಬಹುದು. ನಡೆನುಡಿಯಲ್ಲಿ ಸಂಯಮದಿಂದ ವರ್ತಿಸಿ.
ಸಿಂಹ
ಲಾಭವೂ ಇಲ್ಲದ, ನಷ್ಟವೂ ಇಲ್ಲದ ದಿನವಿಂದು. ಆದರೂ ತೃಪ್ತಿಯಿಂದ ದಿನ ಕಳೆಯುವಿರಿ. ಆಪ್ತರ ಜತೆ ಆತ್ಮೀಯ ಒಡನಾಟ.
ಕನ್ಯಾ
ಒತ್ತಡದ ದಿನ. ಎಲ್ಲವೂ ಸರಿಯಾಗಿ ನಡೆಯಲು ಹೆಚ್ಚು ಶ್ರಮ ಹಾಕಬೇಕು. ಪ್ರೀತಿಯ ವಿಷಯದಲ್ಲಿ ಹಿನ್ನಡೆ ಉಂಟಾಗಬಹುದು.
ತುಲಾ
ಉದ್ಯೋಗ ಕ್ಷೇತ್ರದ ಸಮಸ್ಯೆ ನಿವಾರಣೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಆರ್ಥಿಕ ಪರಿಸ್ಥಿತಿ ಸ್ಥಿರ. ಆಪ್ತ ಬಂಧುವಿನ ಭೇಟಿ.
ವೃಶ್ಚಿಕ
ನಿಮ್ಮನ್ನು ಕಾಡುವ ಚಿಂತೆಯ ಕುರಿತು ಮುಕ್ತವಾಗಿ ಚಿಂತಿಸಿ. ಅದನ್ನು ಮರೆಗೆ ಸರಿಸಬೇಡಿ. ಪರಿಹಾರ ಕಂಡುಕೊಳ್ಳಿ.
ಧನು
ಸುತ್ತ ನೋಡಿ, ಒಳ್ಳೆಯ ವಿಚಾರಗಳಿಗೆ ಗಮನ ಕೊಡಿ. ಆಗ ನಿಮ್ಮ ವೈಯಕ್ತಿಕ ಕೊರಗು ಕಡಿಮೆಯಾಗಲಿದೆ. ಆದಾಯ ಹೆಚ್ಚಳ.
ಮಕರ
ನಿಮ್ಮ ಕೋಪ ನಿಯಂತ್ರಿಸಬೇಕು. ಇಲ್ಲವಾದರೆ ಇತರರ ವಿರೋಧ ಕಟ್ಟಿಕೊಳ್ಳುವಿರಿ. ಹಣದ ಕೊರತೆ ನೀಗಲಿದೆ. ಆಪ್ತರಿಂದ ನೆರವು.
ಕುಂಭ
ಕುಟುಂಬದಲ್ಲಿ ಉಂಟಾಗಿದ್ದ ವೈಮನಸ್ಸು ನಿವಾರಣೆ. ಎಲ್ಲವೂ ಹಿತಕರವಾಗಿ ಕಾಣಲಿದೆ. ಮಕ್ಕಳು ಆಡುವಾಗ ಎಚ್ಚರ ವಹಿಸಬೇಕು.
ಮೀನ
ಹರುಷದ ದಿನ. ಕಾರಣವಿಲ್ಲದೇ ಉಲ್ಲಾಸ. ಹಳೆಯ ಸಮಸ್ಯೆ ಪರಿಹಾರ. ಆಪ್ತರ ಜತೆಗಿನ ಮುನಿಸು ಶಮನ. ಆರ್ಥಿಕ ಕೊರತೆ ನೀಗುವುದು.

error: Content is protected !!