ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ಗೆ ಅಫ್ಘಾನಿಸ್ತಾನ, 15 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಿದೆ.
ಸ್ಪಿನ್ ಆಲ್ರೌಂಡರ್ ರಶೀದ್ ಖಾನ್ ತಂಡವನ್ನು ಮುನ್ನಡೆಸಲಿದ್ದು, ಗುಲ್ಬದಿನ್ ನೈಬ್ ಮತ್ತು ನವೀನ್ ಉಲ್ ಹಕ್ ತಂಡಕ್ಕೆ ಮರಳಿದ್ದಾರೆ.
ವಿಶ್ವಕಪ್ಗೂ ಮುನ್ನ ಈ 15 ಜನರ ತಂಡವು ಜನವರಿ 19 ರಿಂದ 22 ರವರೆಗೆ ಯುಎಇಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾಗವಹಿಸಲಿದ್ದು, ಜಾಗತಿಕ ಟೂರ್ನಮೆಂಟ್ಗೆ ಸಿದ್ಧತೆ ನಡೆಸಲಿದೆ.
ಅಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕೆನಡಾ ಜೊತೆಗೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸುವ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಅಹಮದಾಬಾದ್ಗೆ ತೆರಳಲಿದೆ. ತನ್ನ ಕೊನೆಯ ಎರಡು ಲೀಗ್ ಪಂದ್ಯಗಳು ಕ್ರಮವಾಗಿ ದೆಹಲಿ ಮತ್ತು ಚೆನ್ನೈನಲ್ಲಿ ಯುಎಇ ಮತ್ತು ಕೆನಡಾ ವಿರುದ್ಧ ನಡೆಯಲಿವೆ.
ಅಫಘಾನಿಸ್ತಾನ ತಂಡ
ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ಅಬ್ದುಲ್ಲಾ ಅಹ್ಮದ್ಝೈ, ಸೇದಿಕುಲ್ಲಾ ಅಟಲ್, ಫಜಲ್ಹಕ್ ಫಾರೂಕಿ, ರಹಮಾನುಲ್ಲಾ ಗುರ್ಬಾಜ್, ನವೀನ್ ಉಲ್ ಹಕ್, ಮೊಹಮ್ಮದ್ ಇಶಾಕ್, ಶಾಹಿದುಲ್ಲಾ ಕಮಾಲ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರೆಹಮಾನ್, ದರ್ವಿಶ್ ರಸೂಲಿ, ಇಬ್ರಾಹಿಂ ಜದ್ರಾನ್.
ಮೀಸಲು ಆಟಗಾರರು: ಎಎಮ್ ಗಜನ್ಫರ್, ಇಜಾಜ್ ಅಹ್ಮದ್ಝೈ, ಜಿಯಾ ಉರ್ ರೆಹಮಾನ್ ಶರೀಫಿ.

