ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮತ್ತೊಮ್ಮೆ ತಮ್ಮ ಹೇಳಿಕೆಗಳಿಂದ ಸಿನಿಮಾ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾವನ್ನು ಮುಕ್ತವಾಗಿ ಹೊಗಳಿದ್ದ ಆರ್‌ಜಿವಿ, ಇದೀಗ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗ್ಗೆ ಟೀಕಾತ್ಮಕವಾಗಿ ಮಾತನಾಡಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಮತ್ತು ಧುರಂಧರ್–2 ಎರಡೂ 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿರುವುದು ಈ ಚರ್ಚೆಗೆ ಕಾರಣವಾಗಿದೆ.
ಆರ್‌ಜಿವಿ ಸಾಮಾಜಿಕ ಜಾಲತಾಣದಲ್ಲಿ, “ಧುರಂಧರ್–2ರ ಬೈಟ್ ಇನ್ನಷ್ಟು ವಿಷಕಾರಿಯಾಗಿರುತ್ತದೆ” ಎಂದು ಬರೆಯುವ ಮೂಲಕ ದಕ್ಷಿಣದ ಸಿನಿಮಾಗಳನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಈ ಹೇಳಿಕೆ ದಕ್ಷಿಣ ಚಿತ್ರರಂಗದ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಬಾಲಿವುಡ್‌ನತ್ತ ಬರುತ್ತಿರುವ ದಕ್ಷಿಣದ ಆಕ್ರಮಣದ ಬೆಂಕಿಯ ಚೆಂಡನ್ನು ಆದಿತ್ಯ ಧರ್ ಫಿಲ್ಮ್ಸ್ ಎಡಗಾಲಿನಿಂದ ಹಿಂದಕ್ಕೆ ಒದೆದಿದೆ, ಅದು ಧುರಂಧರ್ ಮತ್ತು ಈಗ ಅವರ ಬಲಗಾಲು ಧುರಂಧರ್ 2 ನೊಂದಿಗೆ ಸಿದ್ಧವಾಗುತ್ತಿದೆ. ಮೊದಲನೆಯದು ಅವರನ್ನು ಹೆದರಿಸಿದರೆ, ಎರಡನೆಯದು ಅವರನ್ನು ಭಯಭೀತಗೊಳಿಸುತ್ತದೆ ಎಂದು ಹೇಳಿದ್ದರು.
ಧುರಂಧರ್ ಕೆಲವು ದೇಶಗಳಲ್ಲಿ ನಿಷೇಧ ಎದುರಿಸಿದರೆ, ಟಾಕ್ಸಿಕ್ ವಿಭಿನ್ನ ಕಥಾಹಂದರದೊಂದಿಗೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ. ಇಬ್ಬರ ನಡುವಿನ ಪೈಪೋಟಿಯಲ್ಲಿ ಅಂತಿಮವಾಗಿ ಗೆಲ್ಲುವುದು ಗುಣಮಟ್ಟದ ಕಥೆಯೇ ಎಂದು ಸಿನಿರಸಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

