ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿ ತೀವ್ರಗೊಂಡಿದೆ. ಇದೀಗ ಎರಡು ವಾರದಲ್ಲಿ ನಾಲ್ಕನೇ ಹಿಂದು ಮೇಲೆ ದಾಳಿಯಾಗಿದೆ.
ದೀಪು ಚಂದ್ರದಾಸ್ ಎಂಬ ಹಿಂದುವಿನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಬಾಂಗ್ಲಾದೇಶ ಉದ್ರಿಕ್ತರ ಗುಂಪು ಇದೀಗ ಹಿಂದು ವ್ಯಾಪಾರಿ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ಘಟನೆ ಭಾರತೀಯ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಕೆಕೆಆರ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
40 ವರ್ಷದ ಖೋಕಾನ್ ಚಂದು ಕೀರಬಂಗಬಜಾರ್‌ನಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾನೆ. ಡಿಸೆಂಬರ್ 31ರ ರಾತ್ರಿ 9 ಗಂಟೆಗೆ ಮೆಡಿಕಲ್ ಶಾಪ್ ಮುಚ್ಚಿದ ಚಂದು ಸ್ಕೂಟರ್ ಮೂಲಕ ಮನೆಗೆ ಮರಳುವಾಗ ಉದ್ರಿಕ್ತರ ಗುಂಪು ಚಂದು ತಡೆದು ದಾಳಿ ನಡೆಸಿದ್ದಾರೆ. ತಿಲೋಯ್ ವಲಯದಲ್ಲಿ ಈ ಘಟನೆ ನಡೆದಿದೆ. ಭಾರತ ವಿರೋಧಿ ಘೋಷಣೆ ಕೂಗುತ್ತಿದ್ದ ಗುಂಪು, ಚಂದು ತಡೆದಿದ್ದಾರೆ. ಈ ವೇಳೆ ಚಂದು ಹಿಂದು ಅನ್ನೋದು ಗೊತ್ತಾಗಿದೆ. ಹೀಗಾಗಿ ಚಾಕು, ತಲ್ವಾರ್ ಮೂಲಕ ಚಂದು ಮೇಲೆ ದಾಳಿ ನಡೆಸಿದ್ದಾರೆ.
ಶಾರುಖ್ ಖಾನ್ ವಿರುದ್ಧ ಭಾರಿ ಆಕ್ರೋಶ
ಬಾಂಗ್ಲಾದೇಶದಲ್ಲಿ ಸತತವಾಗಿ ಹಿಂದುಗಳ ಮೇಲೆ ದಾಳಿಯಾಗುತ್ತಿದೆ. ಭಾರತ ವಿರೋಧಿ ಘೋಷಣೆ ಕೂಗುತ್ತಿದ್ದಾರೆ. ಹಿಂದುಗಳ ಮನೆಗಳಿಗೆ ಬೆಂಕಿ ಹಚ್ಚತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರಹಮಾನ್‌ಗೆ 9.2 ಕೋಟಿ ರೂಪಾಯಿ ನೀಡಿ ಖರೀದಿಸಿದೆ.
ಬಾಂಗ್ಲಾದೇಶದ ಬಹುತೇಕರು ಭಾರತದಲ್ಲಿ ಅಕ್ರಮವಾಗಿ ನೆಲೆಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ. ಇದೇ ಹಣ ಬಳಸಿ ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಕೂಗು ಹೆಚ್ಚಾಗುತ್ತಿದೆ. ಹೀಗಿರುವಾಗ ಬಾಂಗ್ಲಾದೇಶ ಕ್ರಿಕೆಟಿಗರನ್ನು ಖರೀದಿಸುವು ಸೂಕ್ತವಲ್ಲ. ಶಾರುಖ್ ಖಾನ್ ಹಾಗೂ ಕೆಕೆಆರ್ ವಿರುದ್ದ ದೇವಿಕಾನಂದನ್ ಠಾಕೂರ್ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಶಾರುಖ್ ಖಾನ್ ಭಾರತ, ಹಿಂದುಗಳ ಪ್ರೀತಿಸುತ್ತಿದ್ದರೆ, ಬಾಂಗ್ಲಾದಲ್ಲಿ ಹಿಂದು ಮೇಲೆ ನಡೆಯುತ್ತಿರುವ ದಾಳಿಯಿಂದ ನೋವಾಗಿದ್ದರೆ, ತಕ್ಷಣವೇ ಮುಸ್ತಾಫಿಜುರ್ ರಹಮಾನ್ ಖರೀದಿ ರದ್ದುಗೊಳಿಸುವಂತೆ ಸೂಚಿಸಿದ್ದಾರೆ.

