Saturday, January 3, 2026

ಟೀ ಕುಡಿದು ವಾಪಾಸ್‌ ಗಾಡಿ ಬಳಿ ಬಂದವರಿಗೆ ಶಾಕ್‌, ಸ್ಕೂಟಿಯಲ್ಲಿತ್ತು ನಾಗಪ್ಪ!

ಹೊಸದಿಗಂತ ವರದಿ ದಾಂಡೇಲಿ :

ನಗರದ ಬಸ್ ನಿಲ್ದಾಣದ ಹತ್ತಿರದ ಸಲಗರ ಟೀ ಅಂಗಡಿಯ ಮುಂಭಾಗದ ಜೆ.ಎನ್ ರಸ್ತೆಯ ಬದಿಯಲ್ಲಿ ನಿಲ್ಲಿಸಿಟ್ಟಿದ್ದ ಸ್ಕೂಟಿಯೊಂದರೊಳಗೆ ಹಾವೊಂದು ಸೇರಿಕೊಂಡು, ದ್ವಿಚಕ್ರ ವಾಹನದ ಸವಾರ ಒದ್ದಾಡಿದ ಘಟನೆ ಶುಕ್ರವಾರ ನಡೆದಿದೆ.

ಸಲಗರ ಟೀ ಪಾಯಿಂಟ್ ಮಾಲಕ ಶುಭಂ‌ ವಿಜಯ ಕೋಲೆಕರ ಅವರು ತಮ್ಮ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನದೊಳಗೆ ಹಾವೊಂದು ನುಸುಳಿಕೊಂಡಿದೆ. ಎಷ್ಟು ಹೊತ್ತಾದರೂ ಅದು ಹೊರಗೆ ಬರದೇ ಇದ್ದಾಗ, ಶುಭಂ ಹಾಗೂ ಸ್ಥಳೀಯರು ಅದನ್ನು ಹೊರಗೆ ತೆಗೆಯಲು ಹರ ಸಾಹಸ ಪಟ್ಟಿದ್ದಾರೆ. ಅಂತಿಮವಾಗಿ ಅದು ಸಾಧ್ಯವಾಗದೇ ಇದ್ದಾಗ ಕೊನೆಗೆ ಕುಳಗಿ ರಸ್ತೆಯಲ್ಲಿರುವ ಟಿವಿಎಸ್ ಶೋರೂಮ್ ಗೆ ಕಳುಹಿಸಿ ಹಾವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಯಿತು.

error: Content is protected !!