Friday, January 2, 2026

ಕುಡುಕ್ರಿಗೆ ರಸ್ತೆಯೇ ದೊಡ್ಡ ಮಂಚ! ರೋಡ್ ಮಧ್ಯೆ ಮಲಗಿ ಸವಾರರಿಗೆ ಕಿರಿಕಿರಿ ಮಾಡಿದ ಎಣ್ಣೆ ಪಾರ್ಟಿ

ಹೊಸದಿಗಂತ ವರದಿ ಮುಂಡಗೋಡ:

ಪಟ್ಟಣದ ಶಿರಶಿ ಹುಬ್ಬಳ್ಳಿ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ರಸ್ತೆ ಮಧ್ಯೆ ಮಲಗಿ ಸವಾರರಿಗೆ ಕಿರಿಕಿರಿ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಶಿರಶಿ ಹುಬ್ಬಳ್ಳಿ ಮಾರ್ಗದಲ್ಲಿ ನೂರಾರು ವಾಹನಗಳು ಓಡಾಡುತ್ತದೆ. ಈ ವ್ಯಕ್ತಿ ಕಂಟಪೂರ್ತಿ ಕುಡಿದ ಆ ನಶೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆಯ ಮಧ್ಯೆ ಮಲಗಿ ಸವಾರರನ್ನು ಹೈರಾಣ ಮಾಡಿದ್ದಾನೆ.

ಬೃಹತ ವಾಹನ ಹಾಗೂ ಬಸ್ ಚಾಲಕರು ಹಿಡಿ ಶಾಪ ಹಾಕಿಕೊಂಡು ರಸ್ತೆ ಪಕ್ಕದಲ್ಲಿ ತೆರಳುತ್ತಿರುವ ದೃಶ್ಯ ಕಂಡುಬಂತು. ಬೈಕ್ ಸವಾರರು ರಸ್ತೆ ಪಕ್ಕದಲ್ಲಿ ತೆರೆಳಿದರು. ಇಷ್ಟೆಲ್ಲಾ ಈ ವ್ಯಕ್ತಿ ಅವತಾರ ಮಾಡಿದರು ಸಾರ್ವಜನಿಕರಾಗಲಿ, ಪೊಲೀಸರಾಗಲಿ ಈತನನ್ನು ಎಬಿಸಲು ಮುಂದಾಗದಿರುವುದು ವಿಪರ್ಯಾಸ ಸಂಗತಿಯಾಗಿದೆ. ಎರಡು ಗಂಟೆಗಳ ನಂತರ ಕುಟುಂಬಸ್ಥರು ಈತನನ್ನು ಕರೆದುಕೊಂಡು ಹೋಗಿದ್ದಾರೆ.

error: Content is protected !!