Friday, January 2, 2026

ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ: ಈ ಕುರಿತು ಸಿಎಂ ಸಿದ್ದರಾಮಯ್ಯ ಏನು ಹೇಳಿದ್ರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಳ್ಳಾರಿ ಗಲಾಟೆ ಪ್ರಕರಣ ಸಂಬಂಧ ಘಟನೆ ನಡೆದ ಸ್ಥಳದಲ್ಲಿ ಇರದೇ ಇದ್ದಿದ್ದರಿಂದ ಬಳ್ಳಾರಿ ಎಸ್ಪಿಯನ್ನು ಅಮಾನತು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆರೋಪಗಳಿಗೆಲ್ಲ ನಾನು ಉತ್ತರ ಕೊಡಲ್ಲ. ಘಟನೆ ಸಂಬಂಧ ಈಗಾಗಲೇ ಎಸ್ಪಿಯನ್ನ ಅಮಾನತು ಮಾಡಿದ್ದೇನೆ. ಘಟನಾ ಸ್ಥಳದಲ್ಲಿ ಅವರು ಇರಲಿಲ್ಲ. ಆದ್ದರಿಂದ ಅಮಾನತು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನೂ ಬಳ್ಳಾರಿಯ ಘರ್ಷಣೆ ವೇಳೆ ಗುಂಡಿಗೆ ಕಾಂಗ್ರೆಸ್‌ ಕಾರ್ಯಕರ್ತ ಬಲಿಯಾಗಿದ್ದಾನೆ. ಹೀಗಾಗಿ ಬಳ್ಳಾರಿಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಕಿಸಲು ಕಾಂಗ್ರೆಸ್‌ ಪಕ್ಷದ ನಿಯೋಗವನ್ನ ಕಳುಹಿಸಲು ಮುಂದಾಗಿದೆ. ಮಾಜಿ ಸಚಿವ ಹೆಚ್.ಎಂ ರೇವಣ್ಣ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ರಘುಮೂರ್ತಿ, ಕುಮಾರ್ ನಾಯಕ್, ಜಕ್ಕಪ್ಪನವರ್ ಹಾಗೂ ಬಸನಗೌಡ ಬಾದರ್ಲಿ ಅವರನ್ನೊಳಗೊಂಡ 6 ಮಂದಿ ನಿಯೋಗವನ್ನ ಡಿಸಿಎಂ ಡಿಕೆ ಶಿವಕುಮಾರ್‌ ಅವರು ರಚಿಸಿದ್ದು, ಬಳ್ಳಾರಿಗೆ ಕಳಿಸಿಕೊಡಲಿದ್ದಾರೆ ಎಂದರು.

error: Content is protected !!