Friday, January 2, 2026

ಬಳ್ಳಾರಿ ಗಲಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಾವು: ಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಳ್ಳಾರಿಯಲ್ಲಿ ಕಾಂಗ್ರೆಸ್​ ಶಾಸಕ ಭರತ್ ರೆಡ್ಡಿ ಹಾಗೂ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ನಡೆದ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ . ಈ ಗಲಭೆ ಪ್ರಕರಣದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಳ್ಳಾರಿ ಘಟನೆಯನ್ನು ಟಿವಿಯಲ್ಲಿ ನೋಡಿದ್ದೇನೆ. ಗುಂಪು ಘರ್ಷಣೆ ಆಗಿದೆ. ಶಾಸಕರು, ಇನ್ನೂ ಯಾರು ಯಾರು ಭಾಗಿ ಆಗಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದರು.

ಗಲಭೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಗುಂಡು ಹೊಡೆದವರು ಯಾರು ಎಂದು ಗೊತ್ತಿಲ್ಲ. ಜನಾರ್ದನ ರೆಡ್ಡಿ ಅವರು ಮನೆಯಲ್ಲಿ ಇದ್ದಿದ್ದರೆ ಅಪಾಯ ಆಗ್ತಿತ್ತು ಎನ್ನುವ ಸುದ್ದಿ ನೋಡಿದೆ. ಎಲ್ಲಾ ವರದಿ ಬಂದ ಮೇಲೆ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಖಾಸಗಿ ವ್ಯಕ್ತಿ ಹೊರಗಡೆಯಿಂದ ಗುಂಡು ಹೊಡೆದಿದ್ದು ಎಂದು ಸುದ್ದಿ ನೋಡಿದೆ. ನಿಖರವಾಗಿ ಹೀಗೆ ಎಂದು ಹೇಳಲು ನನಗೆ ಕಷ್ಟ. ಶ್ರೀರಾಮುಲು ಅವರು ಜನಾರ್ಧನ ರೆಡ್ಡಿ ಅವರಿಗೆ ಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದನ್ನು ಕೇಳಿದ್ದೇನೆ ಎಂದರು.

ಗನ್ ಸಂಸ್ಕೃತಿ ರಾಜ್ಯಕ್ಕೂ ಬಂತು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನೇನು ಹೇಳಲ್ಲ. ಕುಮಾರಸ್ವಾಮಿ ಎರಡು ಸಲ ಸಿಎಂ ಆಗಿ ಸಾಕಷ್ಟು ಕ್ರಮ ತಗೊಂಡಿದ್ದಾರೆ. ವಿಪಕ್ಷ‌ನಾಯಕನಾಗಿಯೂ ಹೋರಾಟ ಮಾಡಿದ್ದಾರೆ. ಬಳ್ಳಾರಿ ಘಟನೆ ಬಗ್ಗೆ ನಾನು ಏನೂ ಮಾತಾಡಲ್ಲ. ಗೃಹ ಸಚಿವರು ಸಮಯಕ್ಕೆ ಸರಿಯಾಗಿ ಕ್ರಮ ತಗೋತಾರೆ. ಅವಕಾಶ ಕೊಟ್ರೆ ಸಿಎಂ ಆಗ್ತಿನಿ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ. ಆ ಕಡೆ ಜಾಸ್ತಿ ಗಮನ ಕೊಡ್ತಿದಾರೆ ಎಂದು ದೇವೇಗೌಡರು ಹೇಳಿದರು.

error: Content is protected !!