Tuesday, January 6, 2026

ವಿದ್ಯುತ್‌ ಉಪಕರಣದ ಅಂಗಡಿಗೆ ಬೆಂಕಿ: 17 ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮ

ಹೊಸದಿಗಂತ ವರದಿ ಹುಬ್ಬಳ್ಳಿ:

ವಿದ್ಯುತ್ ಅವಘಡದಿಂದ ಅಕ್ಷಯ ಪಾಕ್೯ನ ಆರ್.ಎಲ್. ಶೆಟ್ಟಿ ರಸ್ತೆಯಲ್ಲಿ ವಿದ್ಯುತ್ ಉಪಕರಣದ ಅಂಗಡಿಗೆ ಬೆಂಕಿ ತಗುಲಿ ಸುಮಾರು 17 ಲಕ್ಷ ರೂ. ಮೌಲ್ಯದ ಉಪಕರಣಗಳು ನಾಶವಾದ‌ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.

ಆರ್.ಎನ್. ಶೆಟ್ಟಿ ರಸ್ತೆಯ ರಾಜೇಂದ್ರ ಕಾಲೋನಿಯ ರಾಜನ್ ಸಾಲುಂಕಿ ಎಂಬುವರ ಸೇರಿದ ಅಂಗಡಿಯಲ್ಲಿ ಅಗ್ನಿ ಅವಘಡವಾಗಿದೆ. ವಿದ್ಯುತ್ ತಗುಲಿ ಬೆಂಕಿ ಹೊತ್ತಿ ಉರಿಯುವುದನ್ನು ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ‌ ದಳದ ಸಿಬ್ಬಂದಿ ಬೆಂಕಿ ನಂದಿಸಿ 7 ಲಕ್ಷ ರೂ. ಮೌಲ್ಯದ ವಸ್ತುಗಳ ರಕ್ಷಿಸಿದ್ದಾರೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣೆಯ 15 ಸಿಬ್ಬಂದಿ ಹಾಗೂ ಎರಡು ವಾಹನಗಳಿದ್ದವು. ಮಹಾನಗರ ಪಾಲಿಕೆ ವಾಡ್೯ ಸದಸ್ಯ ಸಂದೀಲಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!