ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಿಗಂತ ವರದಿ,
ಬಳ್ಳಾರಿಯಲಿ ಬ್ಯಾನರ್ ವಿಚಾರವಾಗಿ ಗಲಾಟೆ ಸಂಬಂಧ ಶಾಸಕ ಜನಾರ್ಧನ ರೆಡ್ಡಿ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಅವರಿಗೆ ನನಗೆ Z+ ಭದ್ರತೆ ಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.
ಶಾಸಕ ಜನಾರ್ಧನ ರೆಡ್ಡಿ ಅವರು ಭದ್ರತೆಗೆ ಮನವಿ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ Z+ ಭದ್ರತೆಯಾದರೂ ಕೇಳಲಿ, ಇರಾನ್ ಇಂದ ಯಾವುದಾದರು ಭದ್ರತೆ ತೆಗೆದು ಕೊಂಡು ಬರಲಿ, ಅಥವಾ ಅಮೆರಿಕಾದಿಂದಲೂ ತರಿಸಿಕೊಳ್ಳಲಿ ತಾವೇ ಭದ್ರತೆ ಮಾಡಿಕೊಳ್ಳಲಿ. ಜನಾರ್ದನ ರೆಡ್ಡಿಗೆ ಭದ್ರತೆ ನೀಡುವುದು ಬೇಡ ಅಂದವರು ಯಾರು? ಭದ್ರತೆ ಕೋರಿ ಜನಾರ್ಧನ ರೆಡ್ಡಿ ಪತ್ರ ಬರೆದಿರುವುದು ಬಹಳ ಸಂತೋಷ . ಬಿಜೆಪಿಯ 100 ಕಾರ್ಯಕರ್ತರನ್ನೇ ಭದ್ರತೆಗೆ ನೇಮಿಸಿ ಕೊಡಲಿ ಎಂದು ಲೇವಡಿ ಮಾಡಿದರು.

