Saturday, September 13, 2025

2.5ಲಕ್ಷ ರೂ. ಹಣಕ್ಕೆ ಮಗು ಮಾರಿದ ತಾಯಿ: ದುಡ್ಡೆಲ್ಲಾ ಖರ್ಚಾದ ನಂತರ ಮಗು ಕಿಡ್ನ್ಯಾಪ್‌ ದೂರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2.5 ಲಕ್ಷ ರೂ.ಗೆ ನವಜಾತ ಶಿಶುವನ್ನು ಮಾರಾಟ ಮಾಡಿ ಬಳಿಕ ಹಣ ಖರ್ಚಾದ ನಂತರ ಮಗುವನ್ನು ವಾಪಸ್ ಕೊಡಿಸಿ ಎಂದು ದೂರು ನೀಡಿದ ಘಟನೆ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿದೆ.

ನಸೀಂ ಬೇಗಂ ಎಂಬ ಮಹಿಳೆ ದೂರು ನೀಡಿದ್ದು, ಅಮುದಾ, ರಮ್ಯಾ ಎಂಬವರಿಗೆ ಮಾರಾಟ ಮಾಡಿದ್ದರು. ನಸೀಂ ಬೇಗಂ 15 ವರ್ಷದ ಹಿಂದೆ ದಸ್ತಗೀರ್ ಎಂಬವರ ಜೊತೆ ಮದುವೆಯಾಗಿದ್ದರು. ದಂಪತಿಗೆ ಎರಡು ಗಂಡು, ಎರಡು ಹೆಣ್ಣುಮಕ್ಕಳಿದ್ದವು. ಶಿವಾಜಿನಗರದ ಘೋಷಾ ಆಸ್ಪತ್ರೆಯಲ್ಲಿ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದರು. ಹಣದಾಸೆಗಾಗಿ ಆ ಸಮಯದಲ್ಲಿ ದಂಪತಿ ನವಜಾತ ಹೆಣ್ಣುಮಗುವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿದ್ದರು.

ಮಾರಾಟ ಮಾಡಿ ಬಂದಿದ್ದ ಹಣ ಖರ್ಚಾದ ಬಳಿಕ ಮಹಿಳೆ ಇದೀಗ ಮಗು ವಾಪಸ್ ಬೇಕು ಎಂದು ಕೇಳುತ್ತಿದ್ದಾರೆ. ಈ ಹಿನ್ನೆಲೆ ಸದ್ಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ