Saturday, January 10, 2026

RELATIONSHIP | ವಿಚಿತ್ರ ಅನಿಸಬಹುದು, ಆದ್ರೆ ಮಕ್ಕಳಿಂದಲೂ ಗಂಡ-ಹೆಂಡತಿ ಮಧ್ಯೆ ಗ್ಯಾಪ್‌ ಬರಬಹುದು!

ಮೇಘನಾ ಶೆಟ್ಟಿ, ಶಿವಮೊಗ್ಗ

ಪತಿ ಪತ್ನಿ ಪ್ರೀತಿಯಿಂದ ಒಬ್ಬರನ್ನೊಬ್ಬರು ಅರಿತುಕೊಂಡು ಇದ್ದಾಗಲೇ ಮುದ್ದಾದ ಕಂದಮ್ಮ ಭೂಮಿಗೆ ಬರೋಕೆ ಸಾಧ್ಯ. ಇನ್ನು ಪ್ರೀತಿಯಿಂದಲೇ ಇರುವ ಪತಿ-ಪತ್ನಿಯನ್ನು ʼದೂರʼ ಮಾಡುವ ಶಕ್ತಿಯೂ ಮಕ್ಕಳಿಗಿದೆಯಂತೆ! ಬೇಕಂತ ಅಲ್ಲದೇ ಹೋದ್ರೂ ಮಕ್ಕಳು ನಿಮ್ಮ ಎಲ್ಲ ಎನರ್ಜಿಯನ್ನು ಡಿಮ್ಯಾಂಡ್‌ ಮಾಡುತ್ತಾರೆ.

ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡೋದು ಸುಲಭದ ಮಾತಲ್ಲ. ಇಬ್ಬರ ನಡುವೆ ಮತ್ತೊಂದು ಜೀವ ಬಂದಾಗ ಸಹಜವಾಗಿಯೇ ಸಣ್ಣ ಪುಟ್ಟ ತೊಂದರೆಗಳಾಗುತ್ತವೆ. ಇದರ ಜೊತೆಗೆ ಖುಷಿಯೂ ಡಬಲ್‌ ಆಗಲಿದೆ. ಮಕ್ಕಳನ್ನೇ ಪ್ರಪಂಚ ಮಾಡಿಕೊಳ್ಳಿ ಬೇಡ ಅನ್ನೋದಿಲ್ಲ. ಆದರೆ ನಿಮ್ಮ ಸಂಗಾತಿಗೂ ಸಮಯ ನೀಡಿ. ಇದು ಮೂವರು ಸ್ಟ್ರಾಂಗ್‌ ಆಗಿ ಜೀವನ ನಡೆಸಲು ಸಹಕಾರಿಯಾಗುತ್ತದೆ. ಉತ್ತಮ ಪೋಷಕರೇನೋ ಆಗುತ್ತೀರಿ ಆದರೆ ಈ ಪ್ರಯತ್ನದಲ್ಲಿ ಬೆಸ್ಟ್‌ ಪತಿ, ಬೆಸ್ಟ್‌ ಪತ್ನಿ ಆಗೋದನ್ನು ಮರೆಯಬೇಡಿ.

ಅಪ್ಪ ಜಗತ್ತಿನಲ್ಲಿ ನಿನ್ನ ಫೇವರೆಟ್‌ ವ್ಯಕ್ತಿ ಯಾರು ಎಂದು ಮಗು ಕೇಳಿದರೆ ಅಮ್ಮ ಎಂದು ಹೇಳಿ. ನಮ್ಮ ಚಂದದ ಬಾಂಧವ್ಯದಿಂದಲೇ ನೀನು ಬಂದಿದ್ದು ಎಂದು ಮಗುವಿಗೆ ಹೇಳಿಕೊಡಿ. ನಿಮ್ಮ ಸಂಬಂಧಕ್ಕೆ ಆಗಾಗ ನೀರೆರೆಯುವುದನ್ನು ಮರೆಯಬೇಡಿ. ಮಕ್ಕಳು ನಿಮ್ಮ ಜೊತೆಯಲ್ಲಿದ್ದರೆ ಸಾಕು, ನಿಮ್ಮ ಮಧ್ಯೆ ಬರಬೇಕು ಎಂದೇನಿಲ್ಲ.

ಇದನ್ನೂ ಓದಿ: ರುಚಿಗಷ್ಟೇ ಅಲ್ಲ, ಹೃದಯದ ಆರೋಗ್ಯ, ಹೊಳೆಯುವ ಚರ್ಮಕ್ಕಾಗಿ ಸೇವಿಸಿ ದಿನಕ್ಕೊಂದು ಕಿತ್ತಳೆ!

ಎಲ್ಲಿಗೆ ಹೋಗ್ತಿದೆ ನಿಮ್ಮ ಎನರ್ಜಿ?

ಮಗು ಹುಟ್ಟಿದ ದಿನದಿಂದ ವರ್ಷಾನುಗಟ್ಟೆಲೆ ಪ್ರತೀ ನಿಮಿಷ ಅವರ ಮುಂದೆಯೇ ಕಳೆಯುವಂತೆ ಮಾಡುತ್ತಾರೆ. ಇದರಿಂದ ಅಕ್ಷರಶಃ ತಂದೆ-ತಾಯಿ ಸುಸ್ತಾಗುತ್ತಾರೆ.

ನಾನು ನೀನು ಎನ್ನುವ ಬದಲು ಗಂಡ ಹೆಂಡತಿಯ ರೋಲ್‌ ಅಪ್ಪ ಅಮ್ಮನಾಗಿ ಬದಲಾಗುತ್ತದೆ. ಪ್ರತೀ ಮಾತಲ್ಲಿಯೂ, ಪ್ರತೀ ಆಲೋಚನೆಯಲ್ಲಿಯೂ ಮಗುವೇ ಇರುತ್ತದೆ. ಗಂಡ ಹೆಂಡತಿ ಕ್ರಮೇಣ ರೂಮ್‌ಮೇಟ್ಸ್‌ ಆಗುತ್ತಾರೆ. ಆಶ್ಚರ್ಯವೆಂದರೆ ರೂಮ್‌ಮೇಟ್ಸ್‌ ಆಗಿ ಇರೋದಕ್ಕೆ ಇಬ್ಬರಿಗೂ ಪ್ರಾಬ್ಲಮ್‌ ಇರೋದಿಲ್ಲ!

ಗಂಡ ಹೆಂಡತಿ ಒಂದು ಲೈನ್‌ ಇದ್ದ ಹಾಗೆ, ಆದರೆ ಈಗ ಮಗು ಆಗಮನದ ನಂತರ ಇದು ಟ್ರಯಾಂಗಲ್‌ ಆಗಿ ಬದಲಾಗುತ್ತದೆ. ಮೊದಲು ಸೀದ ಗಂಡನನ್ನು ಕೇಳುತ್ತಿದ್ದ ವಿಷಯಕ್ಕೆ ಈಗ ಮಗುವನ್ನು ಕಳಿಸುತ್ತೀರಿ. ಅಪ್ಪನ ಹತ್ರ ಕಾರ್ಡ್‌ ಇಸ್ಕೊಂಡು ಬಾ ಹೋಗು ಎಂದು ಹೇಳುತ್ತೀರಿ. ಇದು ನಿಮ್ಮ ಮಾತುಕತೆ ಕಡಿಮೆ ಮಾಡುತ್ತದೆ.

ಇನ್ನು ಪ್ರೀತಿ, ಪ್ರೇಮ, ರೊಮ್ಯಾನ್ಸ್‌ ಎಲ್ಲವನ್ನೂ ಬದಿಗಿಟ್ಟು ರಿಯಲ್‌ ಆಗಿ ದೊಡ್ಡವರಾಗಿಬಿಡ್ತೀರಿ. ಹಣದ ಹೊಂದಾಣಿಕೆ, ಕೆಲಸದ ಬದಲಾವಣೆ ಬಗ್ಗೆ ಆಲೋಚಿಸ್ತೀರಿ. ಎಲ್ಲಿಯೂ ನೆಮ್ಮದಿ ಇಲ್ಲ. ರಾತ್ರಿ ನಿದ್ದೆಯೂ ಇಲ್ಲ.

ದಿನವಿಡೀ ಮಕ್ಕಳ ಹಾಬಿ, ಅವರ ಡ್ಯಾನ್ಸ್‌ ಕ್ಲಾಸ್‌, ಯೋಗ ಕ್ಲಾಸ್‌ಗೆ ಸುತ್ತಿ ಸುತ್ತಿ ರಾತ್ರಿ ಐದು ನಿಮಿಷ ಮಾತಾಡೋದಕ್ಕೂ ಸಮಯಆಗೋದಿಲ್ಲ. ಹಾಸಿಗೆಗೆ ಬಂದ ತಕ್ಷಣವೇ ನಿದ್ದೆಗೆ ಜಾರುತ್ತೀರಿ.

ನಿಮ್ಮ ಹಾಬಿಗಳಿಗೆ ಬೆಲೆ ಕೊಡೋದಿಲ್ಲ. ಮುಂಚೆ ಡೇರಿಂಗ್‌ & ಕ್ರೇಝಿ ಅನಿಸುತ್ತಿದ್ದ ಐಡಿಯಾಗಳೆಲ್ಲ ಈಗ ದುಡ್ಡು ವೇಸ್ಟ್‌ ಎನಿಸುತ್ತದೆ.

ಏನು ಮಾಡಬಹುದು?

ಪ್ರತೀ ವಾರವೂ ಒಂದು ಡೇಟ್‌ ಪ್ಲಾನ್‌ ಮಾಡಿ, ದುಡ್ಡು, ಸಮಯ ಏನನ್ನೂ ಯೋಚಿಸದೇ ಕ್ವಾಲಿಟಿ ಟೈಮ್‌ ಬಗ್ಗೆ ಗಮನಕೊಡಿ.

ನಿಮ್ಮ ಇಶ್ಯೂಗಳ ಬಗ್ಗೆ ಮಾತನಾಡೋದಕ್ಕೆ ಮುಜುಗರ ಬೇಡ, ನಿಮ್ಮ ರಿಲೇಷನ್‌ಶಿಪ್‌ ಎಲ್ಲಿಗೆ ಹೋಗುತ್ತಿದೆ ಎನ್ನುವ ಬಗ್ಗೆ ಮುಕ್ತವಾಗಿ ಮಾತನಾಡಿ, ಸರಿ ಮಾಡಿಕೊಳ್ಳಲು ಯತ್ನಿಸಿ.

ಕೆಲಸ ನನ್ನದಲ್ಲ ಎನ್ನುವ ಕೆಟ್ಟ ಅಭ್ಯಾಸ ಬಿಟ್ಟುಬಿಡಿ. ಇಬ್ಬರೂ ಸೇರಿ ಮಾಡಿದರೆ ಸಮಯ ಉಳಿಯುತ್ತದೆ. ಸಮಯ ಸಿಕ್ಕರೆ ಒಟ್ಟಿಗೇ ಇರಬಹುದು ಎಂದು ಆಲೋಚಿಸಿ.

ನಿಮ್ಮ ಇಂಟಿಮೆಸಿ ರೊಮ್ಯಾನ್ಸ್‌ ಉಳಿಸಿಕೊಳ್ಳಿ, ಆಫೀಸ್‌ಗೆ ಹೋಗುವಾಗ ಹಗ್‌ ಮಾಡಿ ಬೈ ಹೇಳೋದು, ಮನೆಗೆ ಬಂದಾಗ ಕಡಲ್‌ ಮಾಡೋದು ಮಿಸ್‌ ಮಾಡಬೇಡಿ.

ಗಂಡ-ಹೆಂಡತಿ ಮಧ್ಯೆ ಯಾರೇ ಬಂದರೂ ಅವರು ಮೂರನೇ ವ್ಯಕ್ತಿ ಅನ್ನೋದನ್ನು ಮರೆಯಬೇಡಿ. ಮಕ್ಕಳು ನೀವು ಮಾಡಿದ ತ್ಯಾಗ, ಕೊಟ್ಟ ಸಮಯ ಏನನ್ನೂ ನೆನಪಿಟ್ಟುಕೊಳ್ಳೋದಿಲ್ಲ. ನೀವು ಬೆಳೆಸಿದಂತೆ ಅವರು ಬೆಳೆಯುತ್ತಾರೆ. ಮುಂದೊಂದು ದಿನ ಕೆಲಸಕ್ಕೋ, ಓದಲೋ, ಮದುವೆಯಾಗಿಯೋ ಅವರು ದೂರ ಹೋಗುತ್ತಾರೆ. ಆಗ ನೀವಿಬ್ಬರೂ ಅಪರಿಚಿತರಾಗಬೇಡಿ, ರೂಮ್‌ಮೇಟ್ಸ್‌ ಕೂಡ ಆಗಬೇಡಿ. ಗಂಡ ಒಂದು ರೂಮ್‌, ಹೆಂಡತಿ ಒಂದು ರೂಮ್‌ ಸೇರಿಕೊಂಡರೆ ಸಂಬಂಧದಲ್ಲಿ ಬಿರುಕು ಹೆಚ್ಚಾಗುತ್ತದೆ. ಡಿವೋರ್ಸ್‌ ನೀಡುವಷ್ಟು ದೊಡ್ಡ ಸಮಸ್ಯೆಯೂ ಇಲ್ಲ, ಆದರೆ ರೊಮ್ಯಾನ್ಸ್‌ ಕೂಡ ಇಲ್ಲ ಎನ್ನುವಂತೆ ಮಾಡಿಕೊಳ್ಳಬೇಡಿ..

error: Content is protected !!