Sunday, January 11, 2026

Mental Health | ಲೆಕ್ಕಕ್ಕಿಂತ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ! ಅತಿಯಾದ ಆಲೋಚನೆಗೆ ಕಡಿವಾಣ ಹಾಕೋದು ಹೇಗೆ?

ಕೆಲವೊಮ್ಮೆ ಮನಸ್ಸು ನಮ್ಮ ಕೈಯಲ್ಲಿರೋದಿಲ್ಲ. ಆಗಿ ಹೋದ ಘಟನೆಗಳು, ಆಗಬೇಕಾದ ಕೆಲಸಗಳು, ನಾಳೆಯ ಅನಿಶ್ಚಿತತೆ ಎಲ್ಲವೂ ಒಂದೇ ಸಮಯದಲ್ಲಿ ಮನಸ್ಸಿನೊಳಗೆ ಓಡಾಡುತ್ತಿರುತ್ತವೆ. ಯೋಚನೆ ಮಾಡೋದು ಸಹಜ. ಆದರೆ ಅದೇ ಯೋಚನೆಗಳು ಮಿತಿಮೀರಿದಾಗ ಮನಸ್ಸಿಗೆ ಭಾರವಾಗುತ್ತವೆ. ತಲೆ ತುಂಬಿದಂತೆ ಅನಿಸುವುದು, ಗಮನ ಕೇಂದ್ರೀಕರಣ ಕಷ್ಟವಾಗುವುದು, ನಿದ್ದೆ ತಪ್ಪುವುದುl ಇದಕ್ಕೆ ಕಾರಣ ಅತಿಯಾದ ಆಲೋಚನೆ. ಇಂಥ ಯೋಚನೆಗಳು ಸಮಸ್ಯೆ ಬಗೆಹರಿಸುವ ಬದಲು ಒತ್ತಡವನ್ನೇ ಹೆಚ್ಚಿಸುತ್ತವೆ. ಹಾಗಾದರೆ ಈ ಚಿಂತನೆಯ ಚಕ್ರವನ್ನು ಹೇಗೆ ಮುರಿಯಬಹುದು? ಇಲ್ಲಿದೆ ಉತ್ತರ.

ನಿಮ್ಮನ್ನು ಹೆಚ್ಚು ಕಾಡುವ ವಿಷಯ ಯಾವುದು ಅನ್ನೋದನ್ನು ಮೊದಲು ಅರಿತುಕೊಳ್ಳಿ.

ನಿಮ್ಮ ಕೈಯಲ್ಲಿಲ್ಲದ ವಿಷಯಗಳ ಬಗ್ಗೆ ಚಿಂತಿಸೋದಕ್ಕೆ ಅರ್ಥವಿಲ್ಲ.

ನಾಳೆ ಏನಾಗುತ್ತೆ ಅನ್ನೋದನ್ನು ನಕಾರಾತ್ಮಕವಾಗಿ ಕಲ್ಪಿಸಿಕೊಳ್ಳಬೇಡಿ.

ಈ ಯೋಚನೆ ನನಗೆ ಉಪಯೋಗವಾಗುತ್ತಿದೆಯಾ ಎಂದು ನಿಮ್ಮನ್ನೇ ಕೇಳಿ.

ಪುನರಾವರ್ತಿತ ಚಿಂತನೆ ಒತ್ತಡ ಹೆಚ್ಚಿಸುತ್ತದೆ ಅನ್ನೋದು ನೆನಪಿಟ್ಟುಕೊಳ್ಳಿ.

ಒಮ್ಮೆಗೆ ಯೋಚ್ನೆಯಿಂದ ಹೊರಬಂದು ಸುತ್ತಮುತ್ತಲಿನ ಶಬ್ದ, ದೃಶ್ಯ, ಅನುಭವಗಳತ್ತ ಗಮನ ಹರಿಸಿ.

ಎಲ್ಲ ಸಮಯವೂ ಯೋಚನೆ ಮಾಡದೆ, ಒಂದು ನಿರ್ದಿಷ್ಟ ಸಮಯಕ್ಕೆ ಮಾತ್ರ ಅವಕಾಶ ನೀಡಿ.

ಇದನ್ನೂ ಓದಿ: ಆ್ಯಶಸ್‌ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಶಾಕ್: ಹ್ಯಾರಿ ಬ್ರೂಕ್‌ಗೆ ಭಾರೀ ದಂಡ

ನಡಿಗೆ, ಉಸಿರಾಟ ವ್ಯಾಯಾಮ, ಲಘು ವ್ಯಾಯಾಮ ಮನಸ್ಸಿಗೆ ಶಾಂತಿ ನೀಡುತ್ತವೆ.

ಅತಿಯಾದ ಯೋಚನೆ ಜೀವನಕ್ಕೆ ಅಡ್ಡಿಯಾಗಿದ್ರೆ ತಜ್ಞರ ಸಲಹೆ ಪಡೆಯಿರಿ.

ಯೋಚನೆ ಜೀವನದ ಭಾಗ. ಆದರೆ ಅದೇ ಜೀವನವನ್ನೇ ಆವರಿಸಬಾರದು. ಸಕಾರಾತ್ಮಕ ಆಲೋಚನೆಗಳಿಗೆ ಜಾಗ ಕೊಡಿ, ಮನಸ್ಸಿಗೂ ವಿಶ್ರಾಂತಿ ಕೊಡಿ. ಒತ್ತಡಮುಕ್ತ ಬದುಕು ಕಷ್ಟಕರವಲ್ಲ.

error: Content is protected !!