Monday, January 12, 2026

ದಂಪತಿ ಸ್ನಾನಗೃಹದಲ್ಲಿದ್ದಾಗ ಎಂಟ್ರಿ ಕೊಟ್ಟ ಹೊಟೇಲ್‌ ಸಿಬ್ಬಂದಿ! ಹೋಟೆಲ್‌ಗೆ 10 ಲಕ್ಷ ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೋಟೆಲ್‌ ಸಿಬ್ಬಂದಿ ಮಾಡಿದ ಯಡವಟ್ಟಿಗೆ ಈಗ ಉದಯ್‌ಪುರ್ ಲೀಲಾ ಪ್ಯಾಲೇಸ್ ಹೋಟೆಲ್‌ಗೆ 10 ಲಕ್ಷ ರೂ. ದಂಡ ಬಿದ್ದಿದೆ.

ಹೋಟೆಲ್‌ ರೂಮಿನಲ್ಲಿದ್ದ ದಂಪತಿಯು ಖಾಸಗಿ ಕ್ಷಣ ಕಳೆಯುತ್ತಿದ್ದಾಗ ಹೇಳದೇ ಕೇಳದೇ ಮಾಸ್ಟರ್‌ ಕೀ ಬಳಸಿ ಒಳ ನುಗ್ಗಿದ ಸಿಬ್ಬಂದಿ ಖಾಸಗಿ ಕ್ಷಣಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ಹೀಗಾಗಿ ಉದಯ್ ಪುರದ ಐಶಾರಾಮಿ ದಿ ಲೀಲಾ ಪ್ಯಾಲೇಸ್ ಹೋಟೆಲ್ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಹೋಲ್ಡಿಂಗ್ಸ್ ಶ್ಲಾಸ್ ಉದಯ್ ಪುರ್ ಪ್ರೈವೇಟ್ ಲಿಮಿಟೆಡ್‌ಗೆ ಚೆನ್ನೈ ಉತ್ತರ ಜಿಲ್ಲಾ ಗ್ರಾಹಕರ ಕೋರ್ಟ್‌ 10 ಲಕ್ಷ ರೂ. ದಂಡ ವಿಧಿಸಿದೆ.

ಇದು ಒಂದು ವರ್ಷದ ಹಿಂದೆ, ಚೆನ್ನೈ ಮೂಲದ ಮಹಿಳಾ ವಕೀಲರೊಬ್ಬರು ದಾಖಲಿಸಿದ್ದ ಕೇಸ್. ಈ ಪ್ರಕರಣ ಈಗ ಇತ್ಯರ್ಥವಾಗಿದೆ. ಇದರೊಂದಿಗೆ ಕೊಠಡಿಯ ಆ ದಿನದ ಬಾಡಿಗೆ 55 ಸಾವಿರ ರೂ. ಅದಕ್ಕೆ ಶೇ.9 ರಷ್ಟು ಬಡ್ಡಿ ಜೊತೆಗೆ ಕೋರ್ಟ್‌ನ ಖರ್ಚುವೆಚ್ಚಗಳಿಗಾಗಿ 10,000 ರೂ.ಗಳನ್ನ ನೀಡುವಂತೆ ಆದೇಶಿಸಿದೆ. 

2025ರ ಜ.26 ರಂದು ತಮ್ಮ ಪತಿಯ ಹುಟ್ಟುಹಬ್ಬ ಆಚರಿಸಲು ಹಾಗೂ ಬೇಬಿ ಮೂನ್ ದಿನಗಳನ್ನು ಕಳೆಯಲು ಅವರು ಉದಯ್ ಪುರದ ದ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಚೆನ್ನೈನ ಮಹಿಳಾ ವಕೀಲೆಯೊಬ್ಬರು ತಮ್ಮ ಪತಿಯೊಂದಿಗೆ ತಂಗಿದ್ದರು. ಜ. 27ರ ರಾತ್ರಿ ತಂಗಲು ಆ ಕೊಠಡಿ ಬುಕ್ ಆಗಿತ್ತಲ್ಲದೆ, ಆ ಒಂದು ರಾತ್ರಿ ತಂಗಲು ಆ ಹೋಟೆಲ್ ನಲ್ಲಿ ನಿಗದಿಯಾಗಿದ್ದ 55,000 ರೂ.ಗಳನ್ನು ಪಾವತಿಸಿದ್ದರು. 

ಜ. 27ರಂದು ಸಂಜೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಇಬ್ಬರು, ದಂಪತಿಗಳಿಬ್ಬರೂ ಸ್ನಾನಗೃಹದಲ್ಲಿದ್ದಾಗ ಹೋಟೆಲಿನ ಸರ್ವೀಸ್ ಸಿಬ್ಬಂದಿ ಆ ಕೊಠಡಿಯ ಮಾಸ್ಟರ್ ಕೀ ಬಳಸಿ, ಹೇಳದೇ ಕೇಳದೆ ಒಳಗೆ ನುಗ್ಗಿದ್ದ. ಸರ್ವೀಸ್‌ ಇಲ್ಲ ಅಂತಾ ಹೇಳಿದ್ರೂ, ಸ್ನಾನಗೃಹದಲ್ಲಿ ಇಣುಕಿದ್ದ. ಗರ್ಭಿಣಿಯಾಗಿದ್ದ ಆ ಪತ್ನಿಯು ಏಕಾಏಕಿ ಮಾನಸಿಕ ಆಘಾತಕ್ಕೊಳಗಾಗಿದ್ದರು. 

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!