ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೆ ಯಾವುದೇ ಅಂತಾರಾಷ್ಟ್ರೀಯ ಕಾನೂನಿನ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್,ಅಂತಾರಾಷ್ಟ್ರೀಯ ಕಾನೂನು ತಮಗೆ ಲೆಕ್ಕಕ್ಕೇ ಇಲ್ಲ ಎಂಬ ಅರ್ಥ ನೀಡುವ ಮಾತುಗಳನ್ನಾಡಿದ್ದಾರೆ.
ಜಾಗತಿಕ ಶಕ್ತಿಗೆ ಯಾವುದೇ ಮಿತಿಗಳಿವೆಯೇ ಎಂಬ ಪ್ರಶ್ನೆಗೆ, ಹೌದು, ಒಂದು ವಿಷಯವಿದೆ. ನನ್ನ ನೈತಿಕತೆ. ನನ್ನ ಮನಸ್ಸು ಮಾತ್ರ ನನ್ನನ್ನು ತಡೆಯಬಲ್ಲದು. ನನಗೆ ಅಂತಾರಾಷ್ಟ್ರೀಯ ಕಾನೂನಿನ ಅಗತ್ಯವಿಲ್ಲ. ನಾನು ಜನರಿಗೆ ನೋವುಂಟು ಮಾಡಲು ನೋಡುತ್ತಿಲ್ಲ ಎಂದರು.
ಅಂತಾರಾಷ್ಟ್ರೀಯ ಕಾನೂನುಗಳಿಂದ ಅಂತಹ ನಿರ್ಬಂಧಗಳು ಯುಎಸ್‌ಗೆ ಅನ್ವಯಿಸಿದಾಗ ತಾನೇ ಮಧ್ಯಸ್ಥಗಾರನಾಗುತ್ತೇನೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಇದು ಅಂತಾರಾಷ್ಟ್ರೀಯ ಕಾನೂನಿನ ನಿಮ್ಮ ವ್ಯಾಖ್ಯಾನವನ್ನು ಅವಲಂಬಿಸಿರುತ್ತದೆ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.
ತೈವಾನ್ ಚೀನಾಕ್ಕೆ ಬೆದರಿಕೆ ಎಂದು ಕ್ಸಿ ಜಿನ್‌ಪಿಂಗ್ ಪರಿಗಣಿಸಿದ್ದಾರೆಯೇ ಎಂಬ ಪ್ರಶ್ನೆಗೆ, ‘ಅವರು ಏನು ಮಾಡುತ್ತಾರೆ ಎಂಬುದು ಅವರಿಗೇ ಬಿಟ್ಟದ್ದು. ಆದರೆ, ಅವರು ತೈವಾನ್ ಮೇಲೆ ಸಾರ್ವಭೌಮತ್ವ ಸಾಧಿಸಲು ಮುಂದಾದರೆ ನಾನು ತುಂಬಾ ಅತೃಪ್ತನಾಗುತ್ತೇನೆ. ಅವರು ಹಾಗೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದರು.
NATO ಸಂರಕ್ಷಣೆ ಅಥವಾ ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವುದು ಇವೆರಡರಲ್ಲಿ ಹೆಚ್ಚಿನ ಆದ್ಯತೆ ಯಾವುದು ಎಂದು ಕೇಳಿದಾಗ, ನೇರವಾಗಿ ಉತ್ತರಿಸಲು ನಿರಾಕರಿಸಿದ ಟ್ರಂಪ್, ಆದರೆ ಅದು ಒಂದು ಆಯ್ಕೆಯಾಗಿರಬಹುದು ಎಂದ ಅವರು ಮಾಲೀಕತ್ವ ಬಹಳ ಮುಖ್ಯ ತಿಳಿಸಿದರು.
ಗ್ರೀನ್‌ಲ್ಯಾಂಡ್ ಅನ್ನು ಏಕೆ ವಶಕ್ಕೆ ಪಡೆಯಬೇಕು ಅಂದರೆ, ಮಾನಸಿಕವಾಗಿ ಯಶಸ್ಸಿಗೆ ಅಗತ್ಯವೆಂದು ನಾನು ಭಾವಿಸುತ್ತೇನೆ. ಮಾಲೀಕತ್ವವು ನಿಮಗೆ ಮಾಡಲು ಸಾಧ್ಯವಾಗದ ವಿಷಯವನ್ನು ಸಾಧ್ಯವಾಗಿಸುತ್ತದೆ. ನೀವು ಗುತ್ತಿಗೆ ಅಥವಾ ಒಪ್ಪಂದದ ಬಗ್ಗೆ ಮಾತನಾಡುತ್ತಿದ್ದೀರಿ. ಮಾಲೀಕತ್ವವು ನಿಮಗೆ ಕೇವಲ ಒಂದು ದಾಖಲೆಗೆ ಸಹಿ ಹಾಕುವುದರಿಂದ ನೀವು ಪಡೆಯಲಾಗದ ವಸ್ತುಗಳು ಮತ್ತು ಅಂಶಗಳನ್ನು ನೀಡುತ್ತದೆ ಎಂದು ಹೇಳಿದರು.

