Sunday, January 11, 2026

ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌? ಮಾರ್ಗಸೂಚಿ ಸರಿ ಮಾಡ್ಕೊಂಡ್ರೆ ಮ್ಯಾಚ್‌ಗೆ ಅವಕಾಶ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯಪಾಲರು ದ್ವೇಷ ಭಾಷಣ ಬಿಲ್ ರಿಜೆಕ್ಟ್ ಮಾಡಿಲ್ಲ, ಸ್ಪಷ್ಟೀಕರಣವನ್ನೂ ಕೇಳಿಲ್ಲ. ಅವರು ಅಧ್ಯಯನ ಮಾಡಲು ಇಟ್ಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

ಸ್ಪಷ್ಟೀಕರಣ ಕೇಳಿದ್ರೆ ಕೊಡ್ತೀವಿ, ರಿಜೆಕ್ಟ್ ಮಾಡಿದ್ರೆ ಮುಂದೇನು ಮಾಡಬೇಕು ತೀರ್ಮಾನ ಮಾಡ್ತೀವಿ. ಒಳಮೀಸಲಾತಿ ಬಗ್ಗೆಯೂ ಸ್ಪಷ್ಟೀಕರಣ ಕೇಳಿದ್ದಾರೆ ಕೊಡ್ತೀವಿ ಅಂದರು. ಅಲ್ಲದೇ ಬಳ್ಳಾರಿ ಪ್ರಕರಣ, ಸಿಐಡಿಗೆ ಕೊಟ್ಟಿದ್ದೇವೆ. ತನಿಖೆ ನಡೆಯಲಿ, ಸತ್ಯ ಹೊರ ಬರಲಿ ಅಂತಾ ಸ್ಪಷ್ಟಪಡಿಸಿದರು.

ಇದೇ ವೇಳೆ ಆರ್‌ಸಿಬಿ ಮ್ಯಾಚ್ ಸ್ಥಳಾಂತರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೆಎಸ್‌ಸಿಎಗೆ ಸೂಚಿಸಿದ್ದೇವೆ, ಕುನ್ಹಾ ಸಮಿತಿ ವರದಿಯಂತೆ ಮಾರ್ಗಸೂಚಿ ಪಾಲಿಸಬೇಕು. ಮಾರ್ಗಸೂಚಿ‌ ಅನ್ವಯ ‌ಕೆಎಸ್‌ಸಿಎ ಸರಿಪಡಿಸಿದ್ರೆ ಖಂಡಿತ ಅನುಮತಿ ಕೊಡ್ತೀವಿ ಅಂತೇಳಿದ್ರು.

ಆರ್‌ಸಿಬಿ ಮ್ಯಾನೇಜ್ಮೆಂಟ್ ನಮ್ಮ ಬಳಿ ಮಾತುಕತೆಗೆ ಬಂದಿಲ್ಲ, ಕೆಎಸ್‌ಸಿಎ ಆಡಳಿತ ಮಂಡಳಿ ಅವರು ಮಾತ್ರ ಬಂದಿದ್ರು ಅಂತಾ ಸ್ಪಷ್ಟನೆ ನೀಡಿದರು.

error: Content is protected !!