ಮಗು ಹುಟ್ಟಿದ ಕ್ಷಣದಿಂದಲೇ ತಾಯಿಯ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ನಿದ್ರೆ, ಆಹಾರ, ಆರೋಗ್ಯ ಎಲ್ಲವೂ ಮಗುವಿನ ಸುತ್ತಲೇ ತಿರುಗುತ್ತದೆ. ಅದರಲ್ಲೂ ಮೊದಲ ಆರು ತಿಂಗಳು ಮಗುವಿಗೆ ಎದೆಹಾಲೇ ಸಂಪೂರ್ಣ ಆಹಾರ. ಆದರೆ ಆ ಬಳಿಕ ಪೂರಕ ಆಹಾರ ಆರಂಭಿಸುವಾಗ ಅನೇಕ ತಾಯಂದಿರು ಗೊಂದಲಕ್ಕೆ ಒಳಗಾಗುತ್ತಾರೆ. “ಇದು ಕೊಡಬಹುದಾ?”, “ಅದು ಸುರಕ್ಷಿತವೇ?” ಎಂಬ ಪ್ರಶ್ನೆಗಳು ಸಹಜ. ಅದರ ಜೊತೆಗೆ ಸಂಬಂಧಿಕರು ಎಲ್ಲರೂ ಅದು ಕೊಡಬಹುದು, ಇದನ್ನೂ ಕೊಡಬಹುದು ಅಂತಾರೆ ಆದ್ರೆ ತನ್ನ ಮಗುವಿಗೆ ಸರಿಯಾಗಿ ಯಾವ ಆಹಾರ ಕೊಡಬೇಕು ಅನ್ನೋದು ತಾಯಿಯಾದವಳಿಗೆ ಮಾತ್ರ ಗೊತ್ತಿರುತ್ತೆ.
ಮೊದಲ ಆರು ತಿಂಗಳು ಮಗುವಿಗೆ ಎದೆಹಾಲೇ ಸಂಪೂರ್ಣ ಆಹಾರ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದಾದ ನಂತರ ರಾಗಿ ಮಣ್ಣಿಗಳು, ಹಣ್ಣು ಅದರಲ್ಲೂ ಮುಖ್ಯವಾಗಿ ಬಾಳೆಹಣ್ಣು ಸುಲಭವಾಗಿ ಜೀರ್ಣವಾಗುವ ಈ ಹಣ್ಣುನ್ನು ಚೆನ್ನಾಗಿ ಹಿಚುಕಿ ನೀಡಬಹುದು. ಅವಕಾಡೊ ಪೋಷಕಾಂಶ ಸಮೃದ್ಧವಾಗಿದ್ದು ಬೇಯಿಸದೇ ಕೊಡಬಹುದಾದ ಉತ್ತಮ ಆಹಾರ. ಜೊತೆಗೆ ಪಿಯರ್ಸ್ ಹಣ್ಣನ್ನು ಬೇಯಿಸಿ ಪೇಸ್ಟ್ ಮಾಡಿ ನೀಡಬಹುದು. ಕಂದು ಅಕ್ಕಿಯ ಸಿರೇಲ್ ಶಕ್ತಿಯುತವಾಗಿದ್ದು ಪೂರಕ ಆಹಾರಕ್ಕೆ ಸೂಕ್ತ.
ಆದ್ರೆ ಇಲ್ಲಿ ಕೆಲವೊಂದು ಆಹಾರಗಳಿವೆ ಇದನ್ನೂ ತಪ್ಪಿಯೂ ನಿಮ್ಮ ಮಗುವಿಗೆ ಕೊಡೋಕೆ ಹೋಗ್ಬೇಡಿ. ಮುಖ್ಯವಾಗಿ ಬೀಜಗಳು ಮತ್ತು ಪೀನಟ್ ಬಟರ್ ಮಕ್ಕಳಲ್ಲಿ ತೀವ್ರ ಅಲರ್ಜಿಗೆ ಕಾರಣವಾಗಬಹುದು.
ಇದನ್ನೂ ಓದಿ: ಕನ್ನಡದ ಪ್ರಸಿದ್ಧ ಲೇಖಕಿ, ಕಾದಂಬರಿಕಾರ್ತಿ ಆಶಾ ರಘು ಆತ್ಮಹತ್ಯೆ
ಜೇನುತುಪ್ಪದಲ್ಲಿ ಇರುವ ಬ್ಯಾಕ್ಟೀರಿಯಾ ಶಿಶುಗಳಿಗೆ ಅಪಾಯಕಾರಿಯಾದ್ದರಿಂದ ಒಂದು ವರ್ಷವರೆಗೆ ನೀಡಬಾರದು.
ಮೀನು ಹಾಗೂ ಸಮುದ್ರ ಆಹಾರವೂ ಅಲರ್ಜಿಯಾಗುವ ಸಾಧ್ಯತೆ ಇರುವುದರಿಂದ ಇದನ್ನು ತಪ್ಪಿಸುವುದು ಉತ್ತಮ. ಜೊತೆಗೆ ಚಾಕಲೇಟ್‌ನಲ್ಲಿರುವ ಕೆಫಿನ್ ಮತ್ತು ಅಧಿಕ ಸಕ್ಕರೆ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಹೀಗಾಗಿ ಇವಗಳನ್ನು ಕೊಡದೆ ಇರುವುದೇ ಉತ್ತಮ. ದನದ ಹಾಲು ಶಿಶುಗಳ ಕಿಡ್ನಿಗೆ ಒತ್ತಡ ತರಬಹುದು, ಆದ್ದರಿಂದ ಒಂದು ವರ್ಷದೊಳಗೆ ಕೊಡಬೇಡಿ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

