Sunday, January 11, 2026

WPL 2026 | ವಿಜಯದ ಖಾತೆ ತೆರೆದ ಮುಂಬೈ ಇಂಡಿಯನ್ಸ್‌: ಡೆಲ್ಲಿ ವಿರುದ್ಧ 50 ರನ್ ಗಳ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವಿ ಮುಂಬೈನ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2026ರ ಮೂರನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50 ರನ್‌ಗಳ ಸ್ಪಷ್ಟ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಮೊದಲ ಬಾರಿ ಜಯದ ಖಾತೆ ತೆರೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಮೆಲಿಯಾ ಕೆರ್ ಶೂನ್ಯಕ್ಕೆ ಹಾಗೂ ಜಿ. ಕಮಲಿನಿ 16 ರನ್‌ಗಳಿಗೆ ಔಟ್ ಆದರು. ಪವರ್‌ಪ್ಲೇ ಅಂತ್ಯಕ್ಕೆ ತಂಡ 43 ರನ್‌ಗಳಷ್ಟೇ ಗಳಿಸಿತ್ತು. ಈ ಹಂತದಲ್ಲಿ ನೆಟ್ ಸೀವರ್ ಬ್ರಂಟ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಇನ್ನಿಂಗ್ಸ್‌ಗೆ ಚೈತನ್ಯ ತುಂಬಿದರು. ಬ್ರಂಟ್ 46 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರೆ, ಹರ್ಮನ್‌ಪ್ರೀತ್ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿ 74 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಮುಂಬೈ 20 ಓವರ್‌ಗಳಲ್ಲಿ 195 ರನ್ ಗಳಿಸಿತು.

ಇದನ್ನೂ ಓದಿ: FOOD | ಹಬ್ಬದ ಸ್ಪೆಷಲ್‌ಗೆ ತಯಾರಿಸಿ ಕಾಯಿ-ಶೇಂಗಾ ಹೋಳಿಗೆ, ರುಚಿ ಮಾತ್ರ ಅದ್ಭುತ

196 ರನ್ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಿಂದಲೇ ತತ್ತರಿಸಿತು. ಪ್ರಮುಖ ಬ್ಯಾಟರ್‌ಗಳು ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು. ಚಿನೆಲ್ಲೆ ಹೆನ್ರಿ 33 ಎಸೆತಗಳಲ್ಲಿ 56 ರನ್‌ಗಳ ಹೋರಾಟ ನೀಡಿದರೂ ಫಲ ನೀಡಲಿಲ್ಲ. ಡೆಲ್ಲಿ 19 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ಮುಂಬೈ ಪರ ಶಬ್ನಿಮ್ ಇಸ್ಮಾಯಿಲ್, ಅಮೆಲಿಯಾ ಕೆರ್ ಮತ್ತು ಸೀವರ್ ಬ್ರಂಟ್ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!