ಮಹಿಳೆಯರನ್ನು ಮೆಚ್ಚಿಸಬೇಕು ಅಂದಾಗ ಬಹುತೇಕ ಪುರುಷರು ಲುಕ್, ದುಡ್ಡು ಅಥವಾ ಸ್ಟೇಟಸ್ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಆದರೆ ನಿಜವಾಗಿಯೂ ಮಹಿಳೆಯರ ಮನ ಗೆಲ್ಲೋದು ಅಂಥ ದೊಡ್ಡ ವಿಷಯಗಳಿಂದಲ್ಲ. ದಿನನಿತ್ಯದ ವರ್ತನೆ, ಮಾತನಾಡುವ ರೀತಿ ಮತ್ತು ಗೌರವ ತೋರಿಸುವ ಸಣ್ಣ ಸಂಗತಿಗಳೇ ಸಂಬಂಧವನ್ನು ಗಟ್ಟಿ ಮಾಡ್ತವೆ. ಮಹಿಳೆಯರು ಹುಡುಕೋದು ಪರ್ಫೆಕ್ಟ್ ವ್ಯಕ್ತಿಯನ್ನು ಅಲ್ಲ, ತಮ್ಮನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯನ್ನು. ಇದನ್ನು ತಿಳಿದರೆ ಅರ್ಧ ಕೆಲಸ ಮುಗಿದಂತೇ.
- ಮಹಿಳೆಯರು ಮಾತನಾಡುವಾಗ ಕೇವಲ ಉತ್ತರ ಕೊಡೋಕೆ ಕೇಳಬೇಡಿ. ಅವರ ಮಾತು, ಭಾವನೆ, ಆತಂಕ ಎಲ್ಲವನ್ನೂ ಗಮನಿಸಿ ಕೇಳುವುದು ಬಹಳ ಮುಖ್ಯ. “ನಾನು ನಿನ್ನ ಮಾತು ಕೇಳ್ತಿದ್ದೀನಿ” ಅನ್ನೋ ಭಾವನೆ ಅವರಿಗೆ ಒಂಥರಾ ಸೇಫ್ಟಿ ನೀಡುತ್ತೆ.
- ಗೌರವ ಮಾತಿನಲ್ಲಿ ಮಾತ್ರವಲ್ಲ, ನಡೆನುಡಿಯಲ್ಲಿ ಕಾಣಬೇಕು. ಅವರ ಅಭಿಪ್ರಾಯ ಬೇರೆ ಇದ್ದರೂ, ಅದನ್ನು ತಿರಸ್ಕರಿಸದೇ ಒಪ್ಪಿಕೊಳ್ಳುವ ಮನಸ್ಥಿತಿ ಮಹಿಳೆಯರನ್ನು ಹೆಚ್ಚು ಮೆಚ್ಚಿಸುತ್ತದೆ.
- “ಊಟ ಆಯ್ತಾ?”, “ಮನೆಗೆ ತಲುಪಿದ್ದೀಯಾ?” ಅಂತ ಕೇಳೋ ಸಣ್ಣ ಮೆಸೇಜ್‌ಗಳು ಮಹಿಳೆಯರಿಗೆ ದೊಡ್ಡ ಸಂತೋಷ ಕೊಡುತ್ತವೆ. ದುಬಾರಿ ಗಿಫ್ಟ್‌ಗಿಂತ ಈ ಸಣ್ಣ ಕಾಳಜಿ ಹೆಚ್ಚು ಮೌಲ್ಯಯುತವಾದದ್ದು.
- ನಟಿಸೋದು ಅಥವಾ ಫೇಕ್ ಆಗಿರೋದು ಹೆಚ್ಚು ದಿನ ನಡೆಯಲ್ಲ. ನಿಮ್ಮ ಭಾವನೆ, ಉದ್ದೇಶ ಸ್ಪಷ್ಟವಾಗಿದ್ದರೆ ನಂಬಿಕೆ ಹುಟ್ಟುತ್ತದೆ. ಮಹಿಳೆಯರಿಗೆ ನಂಬಿಕೆ ಇದ್ದ ಸಂಬಂಧವೇ ಮುಖ್ಯ ಆಗಿರುತ್ತೆ.
- ಅವರು ತಮ್ಮ ಕನಸು, ಗುರಿಗಳ ಬಗ್ಗೆ ಮಾತನಾಡಿದಾಗ ತಡೆಯಬೇಡಿ. ಬೆಂಬಲ ನೀಡಿ, ಪ್ರೋತ್ಸಾಹಿಸಿ. ಅವರ ಯಶಸ್ಸಿಗೆ ಸಂತೋಷಪಡುವ ವ್ಯಕ್ತಿ ಎಂದರೆ ಮಹಿಳೆಯರಿಗೆ ಆಕರ್ಷಣೆಯೇ ಬೇರೆ ಮಟ್ಟದಲ್ಲಿ ಇರುತ್ತೆ.
ಒಟ್ಟಿನಲ್ಲಿ ಮಹಿಳೆಯರನ್ನು ಮೆಚ್ಚಿಸೋಕೆ ದೊಡ್ಡ ಟ್ರಿಕ್ಸ್ ಬೇಕಿಲ್ಲ. ಮಾನವೀಯತೆ, ಗೌರವ ಮತ್ತು ಸತ್ಯಸಂಧತೆ ಇದ್ದರೆ ಸಂಬಂಧ ಸ್ವಾಭಾವಿಕವಾಗಿ ಸುಂದರವಾಗುತ್ತದೆ.

