Monday, January 12, 2026
Monday, January 12, 2026
spot_img

ಭಾರತೀಯರಿಗೆ ವೀಸಾ ಮುಕ್ತ ಟ್ಸಾನ್ಸಿಟ್ ಸೌಲಭ್ಯ ಘೋಷಿಸಿದ ಜರ್ಮನಿ: ಇದರಿಂದ ಆಗುವ ಲಾಭವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜರ್ಮನಿ ಫೆಡರಲ್ ಚಾನ್ಸಿಲರ್ ಫೆಡ್ರಿಕ್ ಮೆರ್ಜ್ ಭಾರತ ಪ್ರವಾಸದಲ್ಲಿದ್ದು, ಈ ಸಂದರ್ಭ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಫೆಜ್ರಿಕ್ ಮೆರ್ಜ್ ಇಂದು ಅಹಮ್ಮದಾಬಾದ್‌ನಲ್ಲಿ ಭೇಟಿಯಾಗಿ ದಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಭಾರತ ಹಾಗೂ ಜರ್ಮನಿ ನಡುವಿನ ವ್ಯಾಪಾರ ವಹಿವಾಟು, ಭದ್ರತೆ, ಮಾನವ ಸಂಪನ್ಮೂಲ ವಿನಿಮಯ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ವೇಳೆ ಫ್ರೀ ವೀಸಾ ಟ್ರಾನ್ಸಿಟ್ ಸೌಲಭ್ಯ ಭಾರತೀಯರ ಗಮನಸೆಳೆದಿದೆ.

ಭಾರತ ಹಾಗೂ ಜರ್ಮನಿ ನಡುವಿನ ಒಪ್ಪಂದದಲ್ಲಿ ಪ್ರಮುಖವಾಗಿ ಫ್ರಿ ವೀಸಾ ಟ್ರಾನ್ಸಿಟ್ ಅತ್ಯಂತ ಪ್ರಮುಖವಾಗಿದೆ. ಭಾರತೀಯರು ಜರ್ಮನಿ ಮೂಲಕ ಇತರ ದೇಶಗಳಿಗೆ ಪ್ರಯಾಣ ಮಾಡುವಾಗ ಟ್ರಾನ್ಸಿಟ್ ವೀಸಾ ಪಡೆಯುವ ಅಗತ್ಯವಿಲ್ಲ. ಮುಕ್ತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಇದರು ಹಲವು ಭಾರತೀಯರಿಗೆ ಪ್ರಯೋಜನವಾಗಲಿದೆ.

ಇದರಿಂದ ಭಾರತೀಯರಿಗೆ ಆಗುವ ಲಾಭವೇನು?
ವಿಶೇಷವಾಗಿ ಜರ್ಮನಿ ವಿಮಾನ ನಿಲ್ದಾಣಗಳ ಮೂಲಕ ಅಮೆರಿಕ, ಕೆನಾಡ ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡುವ ಭಾರತೀಯರು ಈ ಒಪ್ಪಂದಿಂದ ಪ್ರತ್ಯೇಕವಾಗಿ ಜರ್ಮನಿಯ ಟ್ರಾನ್ಸಿಟ್ ವೀಸಾ ಪಡೆಯುವ ಅಗತ್ಯವಿಲ್ಲ. ಕೇವಲ ಭಾರತೀಯರು ಮಾತ್ರ. ಭಾರತೀಯರು ಜರ್ಮನಿ ಟ್ರಾನ್ಸಿಟ್ ವೀಸಾ ಮುಕ್ತವಾಗಿ ಪ್ರಯಾಣ ಮಾಡಲು ಸಾಧ್ಯವಿದೆ.

ಟ್ರಾನ್ಸಿಟ್ ವೀಸಾ ಪಡೆದ ಭಾರತೀಯರು ಅಂತಾರಾಷ್ಟ್ರೀಯ ಟ್ರಾನ್ಸಿಟ್ ವಲಯದಲ್ಲೇ ಇರಬೇಕು. ಅಂತಾರಾಷ್ಟ್ರೀಯ ಟ್ರಾನ್ಸಿಟ್ ವಲಯದ ಬಟ್ಟು ತೆರಳುವಂತಿಲ್ಲ. ಜೊತೆಗೆ ಪ್ರಯಾಣದ ಡೆಸ್ಟಿನೇಶನ್ ವೀಸಾ ಇರಬೇಕು. ಉದಾಹರಣೆಗೆ ಅಮೆರಿಕ ಪ್ರಯಾಣ ಬೆಳೆಸಿದ್ದರೆ, ಅಮೆರಿಕ ವೀಸಾ ಹಾಗೂ ಪ್ರಯಾಣ ದಾಖಲೆಗಳು ಇರಬೇಕು.

ಜರ್ಮನಿ ಎದುರಿಸುತ್ತಿರುವ ಕಾರ್ಮಿಕ ಕೊರತೆ ನೀಗಿಸಲು ಜರ್ಮನಿ ಭಾರತದ ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಭಾರತದ ಐಟಿ ಎಂಜಿನೀಯರ್ಸ್, ಆರೋಗ್ಯ ಕಾರ್ಯಕರ್ತರು ನೇಮಕ ಮಾಡಿಕೊಳ್ಳಲು ಜರ್ಮನಿ ಉತ್ಸುಕವಾಗಿದೆ. ಹೀಗಾಗಿ ಭಾರತೀಯ ವಿದ್ಯಾರ್ತಿಗಳು, ವೃತ್ತಿಪರರು ಯಾವುದೇ ಅಡೆ ತಡೆ ಇಲ್ಲದೆ ಜರ್ಮನಿ ಪ್ರಯಾಣ ಮಾಡಲು ಈ ಒಪ್ಪಂದಿಂದ ಸಾಧ್ಯವಾಗಿದೆ.

Most Read

error: Content is protected !!