Thursday, September 11, 2025

ದೇಶದಲ್ಲಿ ಯುಪಿಐ ಟ್ರಾನ್ಸಾಕ್ಷನ್ ಗಣನೀಯ ಏರಿಕೆ: ಆಗಸ್ಟ್ ತಿಂಗಳಲ್ಲಿ ಬರೋಬ್ಬರಿ 90,000 ಕೋಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಯುಪಿಐ ಪಾವತಿ (UPI) ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಗಸ್ಟ್ ತಿಂಗಳಲ್ಲಿ ಒಂದು ದಿನದಲ್ಲಿ ಸರಾಸರಿಯಾಗಿ 90,446 ಕೋಟಿ ರೂ ಮೌಲ್ಯದಷ್ಟು ಯುಪಿಐ ವಹಿವಾಟುಗಳು ನಡೆದಿವೆ.

ಸರಾಸರಿ ನಿತ್ಯದ ಯುಪಿಐ ವಹಿವಾಟು ಜನವರಿ ತಿಂಗಳಲ್ಲಿ 75,743 ಕೋಟಿ ರೂ ಇತ್ತು. ಜುಲೈನಲ್ಲಿ ಅದು 80,919 ಕೋಟಿ ರೂಗೆ ಏರಿದೆ. ಈಗ ಆಗಸ್ಟ್​ನಲ್ಲಿ 90,000 ಕೋಟಿ ರೂ ಗಡಿ ದಾಟಿರುವುದು ಗಮನಾರ್ಹ.

ಒಂದು ದಿನದ ಸರಾಸರಿ ಯುಪಿಐ ಟ್ರಾನ್ಸಾಕ್ಷನ್ ಸಂಖ್ಯೆ 12.7 ಕೋಟಿ ಇತ್ತು. ಆಗಸ್ಟ್​ನಲ್ಲಿ ಇದು 67.5 ಕೋಟಿಗೆ ಏರಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕೌಂಟ್​ಗಳಿಂದ 520 ಕೋಟಿ ಯುಪಿಐ ಟ್ರಾನ್ಸಾಕ್ಷನ್​ಗಳು ಆಗಿವೆ. ಅಂದರೆ, ಈ ಅಕೌಂಟ್​ಗಳಿಂದ ಹಣವನ್ನು ಯುಪಿಐ ಮೂಲಕ ಕಳುಹಿಸಲಾಗಿದೆ. ಯುಪಿಐ ಮೂಲಕ ಅತಿಹೆಚ್ಚು ಬಾರಿ ಹಣ ಸ್ವೀಕರಿಸಿರುವುದು ಯೆಸ್ ಬ್ಯಾಂಕ್ ಅಕೌಂಟ್​ಗಳು. 800 ಕೋಟಿ ಟ್ರಾನ್ಸಾಕ್ಷನ್​ಗಳಲ್ಲಿ ಯೆಸ್ ಬ್ಯಾಂಕ್ ಅಕೌಂಟ್​ಗಳಿಗೆ ಹಣ ಬಂದಿದೆ.

ಯುಪಿಐ ಬಳಕೆಯಲ್ಲಿ ಕರ್ನಾಟಕ ನಂ. 2
ಅತಿಹೆಚ್ಚು ಯುಪಿಐ ಬಳಸುವ ಟಾಪ್-3 ರಾಜ್ಯಗಳಲ್ಲಿ ಕರ್ನಾಟಕ ಇದೆ. ಒಟ್ಟಾರೆ ಯುಪಿಐ ಬಳಕೆಯಲ್ಲಿ ಶೇ. 9.8ರಷ್ಟು ಪಾಲು ಮಹಾರಾಷ್ಟ್ರದ್ದು. ಇದು ಜುಲೈನಲ್ಲಿನ ಅಂಕಿ ಅಂಶ. ಕರ್ನಾಟಕದ ಪಾಲು ಶೇ. 5.5, ಉತ್ತರಪ್ರದೇಶದ ಪಾಲು ಶೇ. 5.3 ಇದೆ ಎನ್ನಲಾಗಿದೆ.

ಇದನ್ನೂ ಓದಿ