Wednesday, September 17, 2025

ರೀಲ್ಸ್ ಮಾಡಲು ಹೋಗಿ ಟ್ರ್ಯಾಕ್ಟರ್ ಪಲ್ಟಿ, ಯುವಕ ಸ್ಥಳದಲ್ಲೇ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇತ್ತೀಚಿನ ಯುಪೀಳಿಗೆಯಲ್ಲಿ ರೀಲ್ಸ್‌ ಹುಚ್ಚು ಹೆಚ್ಚಾಗಿದೆ. ಯಾವ ವಸ್ತು, ಯಾವ ಸ್ಥಳ ಏನನ್ನೂ ನೋಡದೇ ಎಲ್ಲರಿಗಿಂತ ಭಿನ್ನ ಎಂದು ಬಿಂಬಿಸಲು ಜನ ರೀಲ್ಸ್‌ ಮಾಡುತ್ತಾರೆ. ಇದೇ ರೀತಿ ರೀಲ್ಸ್‌ ಮಾಡಲು ಹೋಗಿ ಯುವಕನೊಬ್ಬ ಮೃತಪಟ್ಟಿದ್ದಾನೆ.

ಕಡಿದಾದ ಇಳಿಜಾರಿನ ತಿರುವಿನಲ್ಲಿ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ ಪರಿಣಾಮ ಅದು ಪಲ್ಟಿಯಾಗಿದೆ. ಅದರಡಿ ಸಿಲುಕಿ ಯುವಕನೊಬ್ಬ ಮೃತಪಟ್ಟಿದ್ದಾನೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿ.ಜಿ.ಕೊಪ್ಪಲು ಗ್ರಾಮದ ಕಿರಣ್ (19) ಮೃತಪಟ್ಟ ದುರ್ದೈವಿಯಾಗಿದ್ದಾರೆ. 

ಇದನ್ನೂ ಓದಿ