Saturday, August 30, 2025

RCB ಅಭಿಮಾನಿಗಳಿಗೆ ಸಿಹಿಸುದ್ದಿ​​: 4 ವರ್ಷದ ಬಳಿಕ ಕಮ್​ಬ್ಯಾಕ್ ಮಾಡ್ತಾರಾ ಆ ದೈತ್ಯ ಆಟಗಾರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಬಿ ಡಿವಿಲಿಯರ್ಸ್ ಈ ಹೆಸರು ಕೇಳಿದ್ರೆ ಆರ್ ಸಿಬಿ ಕ್ರಿಕೆಟ್​​ ಅಭಿಮಾನಿಗಳ ಮೈ ರೋಮಾಂಚನವಾಗುತ್ತೆ. ಅಸಾಮಾನ್ಯ ಬ್ಯಾಟಿಂಗ್, ಅತ್ಯದ್ಭುತ ಇನ್ನಿಂಗ್ಸ್​​ಗಳು ಕಣ್​​ ಮುಂದೆ ಬರುತ್ತೆ.

ಆದ್ರೆ ಈಗ ಇದೊಂದು ಸುದ್ದಿ ಕೇಳಿದ್ರೆ ಆರ್​ಸಿಬಿ ಫ್ಯಾನ್ಸ್ ಫುಲ್ ಖುಷ್ ಆಗೋದು ಪಕ್ಕಾ. ನಿವೃತ್ತಿಯಿಂದ ಆರ್​ಸಿಬಿಯಿಂದ ದೂರವಾಗಿದ್ದ ಎಬಿ ಡಿವಿಲಿಯರ್ಸ್, ಈಗ ಆರ್​ಸಿಬಿ ತಂಡ ಸೇರುವ ಬಯಕೆ ಹೊರಹಾಕಿದ್ದಾರೆ. ಹಾಗಿದ್ರೆ ಆ ದೈತ್ಯ ಆಟಗಾರ ಹೇಳಿರೋದಾದ್ರೂ ಏನು ಗೊತ್ತಾ?

“ಭವಿಷ್ಯದಲ್ಲಿ ನಾನು ಬೇರೆ ಯಾವುದಾದರೂ ಪಾತ್ರದಲ್ಲಿ ಐಪಿಎಲ್‌ಗೆ ಸೇರಬಹುದು. ಆದರೆ ಒಬ್ಬ ವೃತ್ತಿಪರ ಆಟಗಾರನಾಗಿ ಇಡೀ ಸೀಸನ್ ಆಡುವುದು ಸ್ವಲ್ಪ ಕಷ್ಟ. ಆ ದಿನಗಳು ಮುಗಿದು ಹೋಗಿವೆ ಎಂದು ಭಾವಿಸುತ್ತೇನೆ. ನನ್ನ ಹೃದಯ ಆರ್‌ಸಿಬಿ ಜೊತೆಗಿದೆ. ಯಾವಾಗಲೂ ಇರುತ್ತದೆ. ಆದ್ದರಿಂದ ಫ್ರಾಂಚೈಸಿ ನನಗೆ ಒಂದು ಪಾತ್ರ ಇದೆ ಎಂದು ಭಾವಿಸಿದರೆ, ಇದಕ್ಕೆ ಪೂರಕವಾಗಿ ಸಮಯ ಕೂಡಿ ಬಂದರೆ ನಾನು ಖಂಡಿತವಾಗಿಯೂ ಆರ್‌ಸಿಬಿಯಲ್ಲಿ ಇರುತ್ತೇನೆ.” ಎಂದು ಹೇಳುವ ಮೂಲಕ ಮಿಸ್ಟರ್ 360 ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ.

ಇದನ್ನೂ ಓದಿ