Wednesday, September 3, 2025

ಚಾಮುಂಡೇಶ್ವರಿ ವಕ್ಫ್ ಆಸ್ತಿಯೇ? ಡಿ.ಕೆ ಶಿವಕುಮಾರ್ ಗೆ ಖಡಕ್ ಪ್ರಶ್ನೆ ಕೇಳಿದ ಕರಂದ್ಲಾಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿ.ಕೆ ಶಿವಕುಮಾರ್ ಅವರೇ ನೀವು ಸಿಎಂ ಆಗುವ ವೇಗದಲ್ಲಿ ಹಿಂದೂಗಳಿಗೆ ಅಪಮಾನ ಮಾಡ್ತಿದ್ದೀರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ 3500 ಹೆಚ್ಚು ದೇವಸ್ಥಾನಗಳು ಹಿಂದೂಗಳ ಆಸ್ತಿ. ಸರ್ಕಾರದ ಆಸ್ತಿ ಎಂದರೆ ಮುಜುರಾಯಿ ಆಸ್ತಿ, ಮುಜುರಾಯಿ ಆಸ್ತಿಯಾದರೆ ಅದು ಹಿಂದೂಗಳ ಆಸ್ತಿ ಅಲ್ವ. ಸರ್ಕಾರದ ಆಸ್ತಿ ಹಿಂದೂಗಳದ್ದೂ ಅಲ್ಲ ಅಂದ್ರೆ ಏನು ಹೇಳಲು ಹೊರಟಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಏನಾಗಿದೆ ನಿಮಗೆ ಎಂದು ಕೆಂಡಾಮಂಡಲರಾಗಿದ್ದಾರೆ.

ಡಿಕೆಶಿ ಅವರೇ ನೀವು ಮುಖ್ಯಮಂತ್ರಿಯಾಗುವ ಭರದಲ್ಲಿ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದೀರಿ. ಹಿಂದೂಗಳ ವಿಚಾರದಲ್ಲಿ ಸಂಶಯ ಹುಟ್ಟು ಹಾಕುತ್ತಿದ್ದೀರಿ. ಸರ್ಕಾರವನ್ನು ನೀವು ಬಿಟ್ಟು ಹೋಗಿ. ಹಿಂದೂ ಮಾನಸಿಕತೆ ಇರುವವರು ಬಂದು ಆಡಳಿತ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ