Sunday, August 31, 2025

BIG BOSS | ಭರ್ಜರಿ ಸಕ್ಸಸ್‌ಗಾಗಿ ಸಂಖ್ಯಾಶಾಸ್ತ್ರದ ಮೊರೆ ಹೋದ ಬಿಗ್‌ಬಾಸ್‌ ಟೀಮ್‌, ಒಂದು ಅಕ್ಷರ ಸೇರ್ಪಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೂರಾರು ಜನರ ಲೆಕ್ಕವಿಲ್ಲದಷ್ಟು ಗಂಟೆಗಳ ಶ್ರಮದಿಂದ ಆಗುವ ಹಿಂದಿ ಬಿಗ್‌ಬಾಸ್‌ ಕಾರ್ಯಕ್ರಮ ಇನ್ನೇನು ಕೆಲವೇ ದಿನಗಳಲ್ಲಿ ಜನರ ಮುಂದೆ ಬರಲಿದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಸಣ್ಣ ಬದಲಾವಣೆಯೊಂದು ಆಗಿದೆ.

ಬಿಗ್‌ಬಾಸ್‌ ಟೀಮ್‌ ಸಂಖ್ಯಾಶಾಸ್ತ್ರದ ಮೊರೆ ಹೋದಂತೆ ಕಾಣಿಸುತ್ತಿದೆ. ಈ ಹಿಂದೆ ಬರೀ BIG BOSS ಆಗಿದ್ದ ಹೆಸರು ಇದೀಗ BIGG BOSS ಎಂದು ಬದಲಾವಣೆ ಮಾಡಲಾಗಿದೆ. ಇದರಿಂದ ಕಾರ್ಯಕ್ರಮಕ್ಕೆ ಇನ್ನಷ್ಟು ಸಕ್ಸಸ್‌ ಸಿಗಲಿದೆ ಎಂದು ತಂಡ ನಂಬಿದಂತಿದೆ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಖಗೋಳಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ತಜ್ಞ ಸಂಜಯ್ ಬಿ. ಜುಮಾನಿ ಅವರೊಂದಿಗೆ ಪರಾಸ್ ಮಾತನಾಡುತ್ತಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ, ಸಂಜಯ್ ಜುಮಾನಿ ಬಿಗ್ ಬಾಸ್‌ಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು.

‘ನಾವು ಕಾರ್ಯಕ್ರಮದ ನಿರ್ಮಾಪಕರಿಗೆ ಶೋ ಹೆಸರಿಗೆ ಹೆಚ್ಚುವರಿ ‘ಜಿ’ ಸೇರಿಸಲು ಸೂಚಿಸಿದೆವು. ಆಗ ಅದು ಅದು 24 ಸಂಖ್ಯೆಯನ್ನು ನೀಡುತ್ತಿತ್ತು. 24ನೇ ಸಂಖ್ಯೆಯು ಐಷಾರಾಮಿ, ಹಣ ಮತ್ತು ಖ್ಯಾತಿಯನ್ನು ಆಕರ್ಷಿಸುವ ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಒಂದು ಜಿ ಕಡಿಮೆ ಇದ್ದಿದ್ದರೆ 21 ನಂಬರ್ ಬರುತ್ತಿತ್ತು’ ಎಂದು ಸಂಜಯ್ ಹೇಳಿದ್ದಾರೆ.

ಇದನ್ನೂ ಓದಿ