Sunday, August 31, 2025

ದೆಹಲಿಯಲ್ಲಿ ಪೊಲೀಸ್ ಫೈರಿಂಗ್: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ನ ಇಬ್ಬರು ಸದಸ್ಯರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ನ್ಯೂವ್ ಆಶೋಕ್ ನಗರದಲ್ಲಿ ನಡೆದ ಗುಂನ ದಾಳಿಯ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಾರ್ತಿಕ್ ಜಾಖರ್ ಮತ್ತು ಕವಿಶ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಪೊಲೀಸರು ಒಬ್ಬನ ಕಾಲಿಗೆ ಗುಂಡು ಹಾರಿಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಪ್ರಕಾರ, ಈ ಇಬ್ಬರು ಯುಎಸ್‌ನಲ್ಲಿ ಇರುವ ಗ್ಯಾಂಗ್‌ಸ್ಟರ್ ಹ್ಯಾರಿ ಬಾಕ್ಸರ್‌ಗಾಗಿ ಕೆಲಸ ಮಾಡುತ್ತಿದ್ದರು. ಹ್ಯಾರಿ ಬಾಕ್ಸರ್‌ ಮೇಲೆ ಈಗಾಗಲೇ ಆರಕ್ಕಿಂತ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ.

ಮಯಾಂಕ್ ಸಿಂಗ್‌ ವಿರುದ್ಧ ಜಾರ್ಖಂಡ್, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ಸುಮಾರು 50 ಕ್ರಿಮಿನಲ್ ಪ್ರಕರಣಗಳಿವೆ.

ಈ ತಿಂಗಳ ಆರಂಭದಲ್ಲಿ, ಜಾರ್ಖಂಡ್‌ನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಗ್ಯಾಂಗ್‌ಸ್ಟರ್ ಮಯಾಂಕ್ ಸಿಂಗ್ (ಸುನಿಲ್ ಮೀನಾ) ಎಂಬಾತನನ್ನು ಅಜೆರ್‌ಬೈಜಾನ್‌ನ ಬಾಕುನಿಂದ ಭಾರತಕ್ಕೆ ಕರೆತಂದಿತ್ತು. ಇದು ಜಾರ್ಖಂಡ್‌ನ ಮೊದಲ ಅಂತಾರಾಷ್ಟ್ರೀಯ ಕಾರ್ಯಾಚರಣೆಯಾಗಿದೆ. ಎಟಿಎಸ್‌ನ ಎಸ್‌ಪಿ ರಿಷವ್ ಕುಮಾರ್ ಝಾ, ಮಯಾಂಕ್ ಸಿಂಗ್ ಅಮನ್ ಸಾಹು ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗಳ ನಡುವಿನ ಸಂಪರ್ಕದ ಕೊಂಡಿಯಾಗಿದ್ದಾನೆ. ಆತನಿಂದ ಎರಡೂ ಗ್ಯಾಂಗ್‌ಗಳ ಸಂಬಂಧದ ವಿವರಗಳನ್ನು ಪಡೆಯಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ