ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಣಿಜ್ಯ ನಗರಿ ಮುಂಬೈಯಲ್ಲಿ ಗುರುವಾರ ಮಧ್ಯಾಹ್ನದವರೆಗೆ ಸುಮಾರು 600 ಗಣೇಶ ಮೂರ್ತಿಗಳನ್ನು ನಿಮಜ್ಜನ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಅಧಿಕಾರಿಗಳು, 10 ದಿನಗಳ ಉತ್ಸವದಲ್ಲಿ ಒಂದೂವರೆ ದಿನ ನಂತರ ಐದು ಹಾಗೂ ಏಳನೇ ದಿನದಂದು ಹೆಚ್ಚಿನ ಸಂಖ್ಯೆಯ ಭಕ್ತರು ಗಣೇಶ ಮೂರ್ತಿಗಳನ್ನು ವಿಸರ್ಜಿಸುತ್ತಾರೆ ಎಂದು ತಿಳಿಸಿದ್ದಾರೆ.
ಉತ್ಸವದ ಎರಡನೇ ದಿನವಾದ ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ಒಟ್ಟು 583 ‘ ಗಣಪತಿ ಮೂರ್ತಿಗಳನ್ನು ಸಮುದ್ರ, ಕೆರೆ ಮತ್ತಿತರ ಕಡೆಗಳಲ್ಲಿ ವಿಸರ್ಜಿಸಲಾಗಿದೆ. ಇವುಗಳಲ್ಲಿ 575 ಮನೆಗಳಲ್ಲಿ ಇಡಲಾದ ಗಣಪತಿ ಮೂರ್ತಿಗಳು ಮತ್ತು ಮೂರು ಸಾರ್ವಜನಿಕ ಗಣೇಶೋತ್ಸವದ ಗಣಪತಿ ಮೂರ್ತಿಗಳು ಸೇರಿವೆ.
583 ಗಣಪತಿ ಮೂರ್ತಿಗಳ ಪೈಕಿ ಮನೆಯಲ್ಲಿ ಇಟ್ಟಿದ್ದ 321 ಮೂರ್ತಿಗಳು, ಎರಡು ಸಾರ್ವಜನಿಕ ಗಣೇಶೋತ್ಸವದ ಮೂರ್ತಿಗಳು ಸೇರಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಣೇಶ ಮೂರ್ತಿಗಳ ವಿಸರ್ಜನೆಗಾಗಿ BMC ಈ ವರ್ಷ 70 ಜಲಮೂಲಗಳು ಮತ್ತು 288 ಕೃತಕ ಕೊಳಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದರು.